ತೆಲಂಗಾಣ: ಮಹಿಳೆಯೊಬ್ಬರು ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದಿರುವ ಘಟನೆ ನಡೆದಿದೆ.
ಹಾವು ಕಚ್ಚುತ್ತಿದ್ದಂತೆ ಅದನ್ನು ಕೊಲೆ ಮಾಡಿ ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಮುಕುನೂರುಪಾಲೆಂ ಗ್ರಾಮದ ಶಾಂತಾ ಎಂಬ ಮಹಿಳೆ ಕೂಲಿಗೆ ಹೋಗಿದ್ದ ಸಂದರ್ಭದಲ್ಲಿ ಹಾವು ಕಚ್ಚಿದೆ. ಕೂಡಲೇ ಮಹಿಳೆಯು ಸಹ ಕಾರ್ಮಿಕರೊಂದಿಗೆ ಸೇರಿ ಹಾವನ್ನು ಹೊಡೆದು ಸಾಯಿಸಿದ್ದಾರೆ. ಆನಂತರ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಹಾವಿನ ಸಮೇತ ಬಂದಿದ್ದಾರೆ.
ಆಸ್ಪತ್ರೆಗೆ ಹೋದರೆ ಯಾವ ಹಾವು ಕಚ್ಚಿದೆ ಎಂದು ವೈದ್ಯರು ಪ್ರಶ್ನೆ ಮಾಡಬಹುದು ಎಂಬ ಕಾರಣಕ್ಕೆ ಮಹಿಳೆ ಹಾವನ್ನು ಕೊಂದು ಅದನ್ನು ತಂದಿದ್ದಾರೆ ಎನ್ನಲಾಗಿದೆ. ಕೂಡಲೇ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.