ಹಾಸನ: ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ (Prajwal Revanna Pendrive Case) ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪೆನ್‌ಡ್ರೈವ್ ವೈರಲ್ ಮಾಡಿದ ಆರೋಪದ ಚೇತನ್, ಲಿಖಿತ್ ಹೆಸರಿನ ಇಬ್ಬರನ್ನು ಈಗಾಗಲೇ ಎಸ್ ಐಟಿ ಬಂಧಿಸಿದೆ. ಈ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರ ಬಂದಿದೆ. ಪೆನ್ ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ (Naveen Gowda) ಸ್ಫೋಟಕ ಮಾಹಿತಿ ನೀಡಿದ್ದು,
ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಅರಕಲಗೂಡಿನಲ್ಲಿ ಶಾಸಕ ಎ.ಮಂಜುಗೆ (A Manju) ನೀಡಿದ್ದೆ. ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಂತೆ ಪೆನ್‌ಡ್ರೈವ್ ಹಂಚಿಕೆ ಮಾಡಿದ ಮಹಾನನಾಯಕ ಇವರೇ ಇರಬಹದು ಎಂದು ನವೀನ್‌ಗೌಡ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. ಹೆಚ್.ಡಿ ದೇವೇಗೌಡ, ಹೆಚ್‌ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರೊಂದಿಗೆ ಎ. ಮಂಜು ಅವರು ಇರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆದರೆ, ಈ ಆರೋಪನ್ನು ಮಾಜಿ ಸಚಿವ ಎ. ಮಂಜು ಅಲ್ಲಗಳೆದಿದ್ದಾರೆ.