ಭಾರೀ ಗಾತ್ರದ ಕಲ್ಲು ಬಿದ್ದು 7 ಪ್ರವಾಸಿಗರು ಸಾವು : ಎದೆ ನಡುಗಿಸುವ ವಿಡಿಯೋ ವೈರಲ್
ಬ್ರೆಜಿಲ್ : ಜಲಪಾತವೊಂದರ ಬಳಿ ಪ್ರವಾಸಿಗರು ವಿಡಿಯೋ ಮಾಡುತ್ತಾ ದೋಣಿಯಲ್ಲಿ ಸಾಗುವಾಗ್ಲೇ , ನೋಡ ನೋಡ್ತಿದ್ದಂತೆ ಭಾರೀ ಗಾತ್ರದ ಕಲ್ಲು ಜರಿದು7 ಮಂದಿ ಮೃತಪಟ್ಟಿದ್ದು 9 ಮಂದಿ ಗಾಯಗೊಂಡಿರುವ ಘಟನೆ ಬ್ರೆಜಿಲ್‌ನ ಮಿನಾಸ್ ಗೈಸ್ ನಲ್ಲಿ ನಡೆದಿದೆ.. ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೋ ಕಣಿವೆಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧಿತ 7 ಸೆಕೆಂಡ್ ಗಳ ಎದೆ ನಡುಗಿಸುವ ವಿಡಿಯೋ ವೈರಲ್ ಆಗ್ತಿದೆ..
https://twitter.com/i/status/1479848764940640258
ಜಲಪಾತದ ಸರೋವರದ ಕಡೆ ಹಲವು ದೋಣಿಗಳಲ್ಲಿ ಪ್ರವಾಸಿಗರು ಹೋಗಿದ್ದರು. ಈ ಸಂದರ್ಭದಲ್ಲಿ ಜಲಪಾತದ ಕಲ್ಲಿನ ಒಂದು ಭಾಗ ಮುರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮ ಎರಡು ದೋಣಿಗಳಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ. ಇನ್ನೂ ನೀರಿನಲ್ಲಿ ಕಾಣೆಯಾಗಿರುವ ಮೂವರ ಹುಡುಕಾಟ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 23 ಮಂದಿ ಇತರ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾರೀ ಗಾತ್ರದ ಕಲ್ಲಿನ ಭಾಗ ಮುರಿದು ಬೀಳುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ.








