VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!
ಮಕ್ಕಳ ಮನಸ್ಸು ನಿಷ್ಕಲ್ಮಶ. ಹಾಗೇ ಮಕ್ಕಳ ನಡುವಿನ ಸಂಬಂಧವೂ ಅಷ್ಟೇ ನಿಸ್ವಾರ್ಥವಾಗಿಯೇ ಇರುತ್ತೆ. ಇದಕ್ಕೆ ಪೂರಕ ಈ ವಿಡಿಯೋ ಇಲ್ಲೊಬ್ಬ ಪುಟ್ಟ ಬಾಲಕ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುತ್ತಿರುವ ದೃಶ್ಯದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರ ಹೃದಯ ಕದ್ದಿದೆ. ಬಾಲಕರ ಸ್ನೇಹ ಕಂಡು ನೆಟಿಜನ್ಸ್ ಫಿದಾ ಆಗಿದ್ದಾರೆ.
ಪ್ರೀತಿ ನಿರಾಕರಿಸಿದಕ್ಕೆ ಆಕೆಯ ಸ್ಕೂಟಿ ಸುಟ್ಟುಹಾಕಿದ..!
ಈ ವಿಡಿಯೋದಲ್ಲಿ ಇಬ್ಬರು ಬಾಲಕರು ಮುಖಾಮುಖಿಯಾಗಿ ನಿಂತುಕೊಂಡಿದ್ದು, ಅದರಲ್ಲಿ ಒಬ್ಬ ಮತ್ತೊಬ್ಬನ ಬಳಿ ನೀನು ಈಗ ಚನಾಗಿದ್ದೀಯಾ ಅಲ್ವಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬೇಸರದಲ್ಲಿದ್ದ ಆ ಬಾಲಕ ಹು..ಎಂದು ಹೇಳುತ್ತಾನೆ. ಆದರೂ ಆತನ ಧ್ವನಿಯಲ್ಲಿ ಬೇಸರ ಇರೋದು ಕಾಣುತ್ತದೆ. ಆ ಬಳಿಕ ಮತ್ತೊಬ್ಬ ಬಾಲಕ ನಿನಗೆ ಹಗ್ ಬೇಕಾ ಅಂತ ಕೇಳಿ ಆತನನ್ನ ತಬ್ಬಿಕೊಳ್ತಾನೆ.
ಈ ವಿಡಿಯೋವನ್ನ ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗಿದ್ದು, ಅದಕ್ಕೆ ‘ಒಮ್ಮೊಮ್ಮೆ ಅಪ್ಪುಗೆ’ ಬೇಕು ಎನಿಸುತ್ತೆ ಎಂದು ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ನೆಟಿಜನ್ಸ್ ಮನಗೆದ್ದಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ವ್ಯಾಲೆಂಟೈನ್ಸ್ ಡೇ | ವೆರೈಟಿ ಆಫರ್ ಕೊಟ್ಟ ಲಾ ಕಂಪನಿ
https://twitter.com/Kokomothegreat/status/1356379034708398081
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








