Viral Video: ಕಚ್ಚಾ ಬಾದಾಮ್ ಬೆನ್ನಲ್ಲೆ ಮತ್ತೊಂದು ಹಾಡು ವೈರಲ್

1 min read
viral-video-grape-sellers-catchy-jingle-goes-viral saaksha tv

Viral Video: ಕಚ್ಚಾ ಬಾದಾಮ್ ಬೆನ್ನಲ್ಲೆ ಮತ್ತೊಂದು ಹಾಡು ವೈರಲ್

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಸಣ್ಣ ಹಳ್ಳಿಯಲ್ಲಿ ನಡೆಯವ ಘಟನೆ ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ಹರಡುತ್ತಿದೆ.

ಕೆಲವರು ತಮ್ಮ ಪ್ರತಿಭೆಯಿಂದ ರಾತ್ರೋ ರಾತ್ರಿ ಸ್ಟಾರ್ ಆಗುತ್ತಿದ್ದಾರೆ.

ಹಾಡುಗಳು, ನೃತ್ಯಗಳು ಮತ್ತು ರೀಲ್‌ಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ಜನಪ್ರಿಯತೆಯನ್ನು ಗಳಿಸುತ್ತಿವೆ.

ಹಾಗೇ ಮುನ್ನಲೆಗೆ ಬಂದ ಅದೆಷ್ಟೋ ಮಂದಿ ಸೋಶಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಕಚ್ಚಾ ಬಾದಾಮ್ ಹಾಡು ಸಾಕಷ್ಟು ವೈರಲ್ ಆಗಿತ್ತು. ಇದೀಗ ಅದರಂತೆ ಮತ್ತೊಂದು ಹಾಡು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ  ರಸ್ತೆಯ ಪಕ್ಕ ಗಾಡಿ ಮೇಲೆ ದ್ರಾಕ್ಷಿ ಮಾರುತ್ತಿದ್ದ ವ್ಯಕ್ತಿಯೊಬ್ಬರು ಹಾಡಿರುವ ಹಾಡು ಸದ್ಯ ನೆಟ್ಟಿಗರನ್ನು ಸೆಳೆಯುತ್ತಿದೆ.

ಅದರಲ್ಲಿ ಮುದುಕನೊಬ್ಬ ಗಾಡಿಯಲ್ಲಿ ಪೇರಲೆ, ದ್ರಾಕ್ಷಿ ಮಾರುತ್ತಾ ಹಾಡು ಹೇಳುತ್ತಿರುವುದನ್ನು ಕಾಣಬಹುದು.

ಕೈಯಲ್ಲಿ ಚಹಾದ ಕಪ್ ಹಿಡಿದು, “15 ರೂಪಾಯಿಗೆ 12 ಅಂಗೂರ ತೆಗೆದುಕೊಳ್ಳಿ” ಎಂಬ ಹಾಡನ್ನು  ಹಾಡುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 109 ಸಾವಿರ ಲೈಕ್ಸ್ ಬಂದಿವೆ. viral-video-grape-sellers-catchy-jingle-goes-viral

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd