ಮದುವೆ ಮಂಟಪದಲ್ಲೇ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡಿದ ವರ – VIDEO VIRAL
ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಮೊದಲನೇ ಅಲೆಯಿಂದ ಹಿಡಿದು 2ನೇ ಅಲೆ ತಗ್ಗಿದ್ರೂ ಬಹುತೇಕ ನೌಕರರು ವರ್ಕ್ ಫ್ರಮ್ ಹೋಮ್ ಮಾಡ್ತಾಯಿದ್ದಾರೆ.. ಆದ್ರೆ ಇದ್ರಿಂದಾಗಿ ನೌಕರರು ಸಾಕಷ್ಟು ಒತ್ತಡಕ್ಕೆ ಗುರಿಯಾಗಿದ್ದಾರೆ… ಇದ್ರಿಂದಾಗಿ ಜನರ ಜೀವನ ಶೈಲಿ ಸಂಪೂರ್ಣವಾಗಿಯೇ ಬದಲಾಗಿಬಿಟ್ಟಿದೆ.. ಅದೆಷ್ಟರ ಮಟ್ಟಿಗೆ ಅನ್ನೋದನ್ನ ಊಹೆನೂ ಮಾಡಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ..
ಆದ್ರೆ ಇಂತಹ ಸಂದರ್ಭಗಳಿಗೆ ಹೊಂದುವಂತಹ ಒಂದು ಪ್ರಸಂಗದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.. ವರನೊಬ್ಬ ತನ್ನ ಮದುವೆ ಸಮಯದಲ್ಲಿಯೂ ಮಂಟಪದಲ್ಲಿ ಮಧುಮಗನ ಉಡುಪಿನಲ್ಲಿಯೇ ಕೂತಿದ್ದಾನೆ.. ಸುತ್ತಲೂ ಸಂಬಂಧಿಕರು ಸಂಭ್ರಮದಲ್ಲಿದ್ರೆ ಈತ ಮಾತ್ರ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡುತ್ತಿದ್ದಾನೆ.. ಸದ್ಯ ಈ ವೀಡಿಯೋ ಭಾರೀ ವೈರಲ್ ಆಗಿದೆ.
ವಿವಾಹದ ಆಚರಣೆಗಳು ನಡೆಯುತ್ತಿರುವಾಗಲೇ ಮಂಟಪದಲ್ಲಿ ಕುಳಿತಿದ್ದ ವರ ಲ್ಯಾಪ್ಟಾಪ್ನಲ್ಲಿ ತನ್ನ ಕಚೇರಿಯ ಕೆಲಸದಲ್ಲಿ ನಿರತರಾಗಿದ್ದರು. ದೂರದಲ್ಲೇ ಕೂತಿದ್ದ ವಧು ತನ್ನ ಸಂಗಾತಿ ಕೆಲಸ ನಿರ್ವಹಿಸುತ್ತಿರುವ ದೃಶ್ಯ ನೋಡಿ ನಕ್ಕಿದ್ದಾಳೆ.. ವಧುವಿನ ಈ ಪ್ರತಿಕ್ರಿಯೆ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.
ರಾಜ್ಯದಲ್ಲಿ ‘ಕರಿ ಮಾರಿ’ ಭೀತಿ – 3,629ಕ್ಕೆ ಏರಿದ ಬ್ಲ್ಯಾಕ್ ಫಂಗಸ್ ಕೇಸ್
“ಮಾಂಸ ನಿಷೇಧ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಚಾರ” – ಉತ್ತರಾಖಂಡ ಹೈಕೋರ್ಟ್
ಉದ್ಯೋಗಿಗಳೇ ಗಮನಿಸಿ – ಆಗಸ್ಟ್ 1 ರಿಂದ ಸಿಗಲಿದೆ ಈ ವಿಶೇಷ ಸೌಲಭ್ಯಗಳು..!