VIDEO VIRAl : ಚಲಿಸುತ್ತಿದ್ದ ಕಾರ್ ಮೇಲೆ ಪುಶ್ ಅಪ್ಸ್ : ಸೀದಾ ಜೈಲು ಸೇರಿದ ಯುವಕ..!
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಯುವಕನೊಬ್ಬ ಸ್ಟಂಟ್ ಮಾಡುವ ಹುಚ್ಚು ಸಾಹಸಕ್ಕೆ ಬಿದ್ದು ಸಾವಿನ ಬಗ್ಗೆಯೂ ಲೆಕ್ಕಿಸದೇ ಕಾರ್ ಒಂದರ ಮೇಲೆ ಪುಷ್ ಅಪ್ಸ್ ಮಾಡಿದ್ದಾನೆ. ಕಾರ್ ಮೇಲೆ ಪುಷ್ ಅಪ್ಸ್ ಮಾಡುದ್ರೆ ಅದೇನ್ ದೊಡ್ಡ ವಿಚಾರ ಅಂತ ವೈರಲ್ ಆಗುತ್ತೆ ಅನ್ಸುತ್ತೆ. ಆದ್ರೆ ಈತ ರಸ್ತೆಯ ಮಧ್ಯದಲ್ಲಿ ಚಲಿಸುತ್ತಿದ್ದ ಕಾರ್ ನ ಮೇಲೆ ಪುಷ್ ಅಪ್ಸ್ ಮಾಡಿ ಸುದ್ದಿಯಾಗಿದ್ದಾನೆ. ಈತನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಆದ್ರೆ ಬಹುತೇಕ ನೆಟ್ಟಿಗರು ಇದೆಂಥ ಹುಚ್ಚು. ನಿಮ್ಮಿಂದ ಬೇರೆಯವರು ಇದೇ ರೀತಿ ಮಾಡೋಕೆ ಪ್ರಯತ್ನ ಮಾಡ್ತಾರೆ ಹೀಗೆಲ್ಲಾ ಕಾಮೆಂಟ್ಸ್ ಮಾಡುತ್ತಾ ಕಿಡಿಕಾರಿದ್ದಾರೆ.
ಹೆಂಡತಿ ತವರಿನಿಂದ ಮರಳಲು ನಿರಾಕರಿಸಿದಕ್ಕೆ ನಾಲಿಗೆಯನ್ನೇ ಕತ್ತರಿಸಿಕೊಂಡ..!
ಹೀಗೆ ಸ್ಟಂಟ್ ಮಾಡಿ ಯುವಕ ಫೇಮಸ್ ಏನೋ ಆದ. ಅದೇ ಸ್ಪೀಡ್ ನಲ್ಲೇ ಜೈಲು ಕೂಡ ಸೇರಿದ್ದಾನೆ. ಹೌದು ವಿಡಿಯೋ ವೈರಲ್ ಆಗ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಆತನ ವಿಡಿಯೋಗೆ ಪೊಲಿಸರು ‘ಕಾಫಿನ್ ಡ್ಯಾನ್ಸ್’ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸೇರಿಸಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಈ ರೀತಿ ಮಾಡಿದರೆ ಕಾನೂನಿನ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ ಎನ್ನುವ ಎಚ್ಚರಿಕೆಯ ಸಂದೇಶವನ್ನ ಸಾರ್ವಜನಿಕರಿಗೆ ನೀಡಿದ್ದಾರೆ. ಸಂದೇಶವನ್ನು ಇಲ್ಲಿ ನೀಡಲಾಗಿದೆ ಎಂದು ಪೊಲೀಸರು ಬರೆದಿದ್ದಾರೆ. ಉತ್ತರ ಪ್ರದೇಶದ ಉಜ್ವಲ್ ಯಾದವ್ ಎಂಬ ಯುವಕ ಇಂತಹದೊಂದು ಸಾಹಸ ಮಾಡಿ ಕಂಬಿ ಎಣಿಸುತ್ತಿದ್ದಾನೆ.
https://twitter.com/Uppolice/status/1370643698929733634
ಹುಚ್ಚು….. ಅನ್ನೋದು ಇದನ್ನೇ ನೋಡಿ… ಚನ್ನಾಗಿರೋ ಮುಖವನ್ನ ಬೇಕಂತ್ಲೇ ಈ ರೀತಿ ಹಾಳು ಮಾಡಿಕೊಳ್ಳೋರನ್ನ ನೋಡಿದ್ದೀರಾ..!







