ರೊಟ್ಟಿಗೆ ಉಗಿದವನು ಅಂದರ್..!
ಇತ್ತೀಚೆಗೆ ವ್ಯಕ್ತಿಯೊಬ್ಬ ರೊಟ್ಟಿಯನ್ನ ತಯಾರಿಸುವಾಗ ಅದಕ್ಕೆ ಉಗಿದಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈತನ ಕೃತ್ಯದಿಂದ ನೆಟ್ಟಿಗರು ತೀವ್ರ ಆಕ್ರೋಶಗೊಂಡು ಆತನನ್ನ ಬಂಧಿಸುವಂತೆ ಆಗ್ರಹಿಸಿದ್ದರು.
ಇದೀಗ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 25 ವರ್ಷದ ಖಾಲಿಕ್ ಬಂಧಿತ ಆರೋಫಪಿಯಾಗಿದ್ದು, ಈತ ಬಿಹಾರದ ಕಿಶನ್ಗಂಜ್ ಜಿಲ್ಲೆಯ ನಿವಾಸಿಯಾಗಿದ್ದಾನೆ.
ವಿಡಿಯೋದಲ್ಲಿ ಯುವಕ ಯಾವುದೋ ಸಮಾರಂಭದಲ್ಲಿ ಅತಿಥಿಗಳಿಗೆ ಆಹಾರ ತಯಾರಿಸುತ್ತಿದ್ದ. ರೊಟ್ಟಿಯನ್ನ ನಾದಿದ ಬಳಿಕ ಅದರ ಮೇಲೆ ಉಗಿದು ಬಳಿಕ ಒಲೆಯ ಮೇಲಿಟ್ಟು ಬೇಯಿಸಿದ್ದ. ಈ ವಿಡಿಯೋ ಕಳೆದ ತಿಂಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಅಕ್ಕಿ ಇಡುತ್ತೇನೆ ಎಂದು ಬಂದವ ಯುವತಿಯನ್ನ ಬೆತ್ತಲೆ ಮಾಡಿ ಬ್ಲಾಕ್ ಮೇಲ್ ಮಾಡಿದ..!
ಮನೆಯ ಕರೆಂಟ್ ಕಡಿತಗೊಳಿಸಿದ್ದರಿಂದ ರೋಸಿಹೋದ ವ್ಯಕ್ತಿ ಆತ್ಮಹತ್ಯೆ ಯತ್ನ