ಮನೆಯ ಕರೆಂಟ್ ಕಡಿತಗೊಳಿಸಿದ್ದರಿಂದ ರೋಸಿಹೋದ ವ್ಯಕ್ತಿ ಆತ್ಮಹತ್ಯೆ ಯತ್ನ

1 min read

ಮನೆಯ ಕರೆಂಟ್ ಕಡಿತಗೊಳಿಸಿದ್ದರಿಂದ ರೋಸಿಹೋದ ವ್ಯಕ್ತಿ ಆತ್ಮಹತ್ಯೆ ಯತ್ನ

ಮಹಾರಾಷ್ಟ್ರ : ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಚಿಕ್ಕ ಕಾರಣಕ್ಕೆ ವ್ಯಕ್ತಿಯೊಬ್ಬ ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು ಓಲ್ಡ್ ಮಂಗಳವಾರಿ ಪ್ರದೇಶದ ರಾಜೇಶ್ ಸುಧಾಮ್ ಬ್ಯಾಂಡ್ ಎಂಬಾತ ಈ ರೀತಿಯಾದ ಹೈಡ್ರಾಮಾವನ್ನ ನಡೆಸಿದ್ದಾನೆ. ಈತ 2 ವರ್ಷಗಳಿಂದ ತನ್ನ ಮನೆಯ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಹೀಗಾಗಿ ವಿದ್ಯುತ್ ಸಂಸ್ಥೆಯವರು ಆತನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

ಈ ಬಗ್ಗೆ ಮಾತನಾಡಲು ಕಚೇರಿಗೆ ಬಂದಾಗ ಅಧಿಕಾರಿಗಳು ಮೀಟಿಂಗ್ನ ಲ್ಲಿದ್ದರು. ಅಧಿಕಾರಿಗಳ ಈ ಧೋರಣೆಯಿಂದ ಬೇಸತ್ತ ರಾಜೇಶ್ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಾಯುವ ಪ್ರಯತ್ನಮಾಡಿದ್ದಾನೆ. ಸದ್ಯ ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್ : ಹಣದಾಸೆಗೆ ಹೆತ್ತ ತಾಯಿಯೇ ಮಗಳನ್ನ ಕಾಮುಕರಿಗೆ ಒಪ್ಪಿಸಿದ್ದು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd