ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್ : ಹಣದಾಸೆಗೆ ಹೆತ್ತ ತಾಯಿಯೇ ಮಗಳನ್ನ ಕಾಮುಕರಿಗೆ ಒಪ್ಪಿಸಿದ್ದು..!
ಚಿಕ್ಕಮಗಳೂರು: ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಹಲವಾರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ ಪ್ರಕರಣದ ಇತ್ತೀಚೆಗೆ ತೀರ ಚರ್ಚೆಗೆ ಬಂದಿತ್ತು. ಪ್ರಕರಣದ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಈ ಪ್ರಕರಣದ ರುವಾರಿ ಸಂತ್ರಸ್ತೆಯ ಚಿಕ್ಕಮ್ಮ ಎಂದೇ ಹೇಳಲಾಗಿತ್ತು.
ಈ ಪ್ರಕರಣ ಸಂಬಂಧ ಒಟ್ಟು 32 ಮಂದಿಯನ್ನ ಬಂಧಿಸಿರುವ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಸತ್ಯ ಗೊತ್ತಾಗಿದೆ. ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದ ರೂವಾರಿ ಬಾಲಕಿಯ ಚಿಕ್ಕಮ್ಮ ಅಲ್ಲ ಸ್ವಂತ ತಾಯಿ ಎಂಬ ವಿಚಾರ ಗೊತ್ತಾಗಿದೆ.
ಹೌದು 32 ಜನರನ್ನ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಪೈಕಿ ಸಂತ್ರಸ್ತೆಯ ತಾಯಿ ಗೀತಾ ಕೂಡ ಒಬ್ಬಳು. ಹಣದಾಸೆಗೆ ಮಗಳನ್ನ ವೇಶ್ಯಾವಾಟಿಕೆಗೆ ತಳ್ಳಿದ್ದು, ಆಕೆಯ ಸ್ವಂತ ತಾಯಿಯೇ ಎನ್ನಲಾಗಿದೆ.
ತನಿಖೆಯ ಮೊದಲು ಬಾಲಕಿಯ ಚಿಕ್ಕಮ್ಮ ಎಂದು ಮಹಿಳೆ ಹೇಳಿಕೊಂಡಿದ್ದಳು. ಆದರೆ ತನಿಖೆ ವೇಳೆ ಆಕೆಯೇ ಬಾಲಕಿಯ ಸ್ವಂತ ಅಮ್ಮ ಎಂಬುದು ಸಾಬೀತಾಗಿದೆ. ಉತ್ತರ ಕರ್ನಾಟಕದ ಮಹಿಳೆ ಶೃಂಗೇರಿಗೆ ಬಂದು ಮತ್ತೊಬ್ಬನ ಜೊತೆ ವಿವಾಹವಾಗಿದ್ದಳು. ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡು ಬಾಲಕಿಯನ್ನು ಸಾಕುತ್ತಿದ್ದಳು.
ಕೆಲ ವರ್ಷಗಳ ನಂತರ 2ನೇ ಗಂಡನಿಂದಲೂ ದೂರವಾಗಿದ್ದ ಮಹಿಳೆ, ಶೃಂಗೇರಿಯಲ್ಲೇ ಬಾಲಕಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ವೇಳೆ ಹಣದಾಸೆಗೆ ತನ್ನ ಮಗಳನ್ನು ವೇಶ್ಯಾವೃತ್ತಿಗೆ ತಳ್ಳಿದ್ದಾಳೆ. ಮಗಳ ನಿರಂತರ ಅತ್ಯಾಚಾರಕ್ಕೆ ತಾಯಿಯೇ ಅವಕಾಶ ಮಾಡಿಕೊಟ್ಟಿದ್ದಳು ಎನ್ನಲಾಗಿದೆ.
65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ , ಚಾಕುವಿನಿಂದ ಇರಿದು ಪರಾರಿ..!
ಎರಡನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ
ಆರ್‌ಎಸ್‌ಎಸ್ ಅನ್ನು‘ ಸಂಘ ಪರಿವಾರ್ ’ಎಂದು ಕರೆಯುವುದಿಲ್ಲ – ರಾಹುಲ್ ಗಾಂಧಿ
BIGGBOSS 8 : ದೊಡ್ಮನೆಯಲ್ಲಿ ಬರೀ ಪ್ರಶಾಂತ್ ಸಂಬರಗಿಯದ್ದೇ ಮಾತು..!