ಎರಡನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ

1 min read
CD case

ಎರಡನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ

ಬೆಂಗಳೂರು : ಮಾಜಿ ಸಚಿವ ರಾಸಲೀಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ಆಗಿದ್ದು, ರಾಸಲೀಲೆ ವಿಡಿಯೋದಲ್ಲಿ ಕಾಣಿಸಿಕೊಂಡ ಎನ್ನಲಾದ ಯುವತಿ ಇಂದು ಮತ್ತೊಂದು ವಿಡಿಯೋವನ್ನ ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲಿ ಯುವತಿ ತನ್ನ ಪೋಷಕರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಾಗೆ ರಕ್ಷಣೆ ನೀಡಿದ್ದಲ್ಲಿ ಎಸ್ ಐಟಿ ತನಿಖೆಗೆ ಹಾಜರಾಗುವುದು ಎಂದು ತಿಳಿಸಿದ್ದಾಳೆ.

ವಿಡಿಯೋದಲ್ಲಿ ಯುವತಿ, ನಮ್ಮ ಅಪ್ಪ, ಅಮ್ಮ ಸ್ವಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ.

ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್ ಐಟಿಗೆ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ.

cd-case

ಇನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಎಸ್ ಐಟಿ ಮೇಲೆ ಅನುಮಾನ ವ್ಯಕ್ತಪಡಿಸಿರುವ ಅವರು, ಮಾರ್ಚ್ 12 ರಂದು ವಿಡಿಯೋ ಹೇಳಿಕೆಯನ್ನ ಎಸ್ ಐಟಿಗೆ ನೀಡಿದ್ದೆ.

ಆದ್ರೆ ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ ಅರ್ಧಗಂಟೆಯಲ್ಲಿ ನನ್ನ ವಿಡಿಯೋ ವೈರಲ್ ಮಾಡಿದ್ದಾರೆ.

ನನಗೆ ಎಸ್ ಐಟಿ ಯಾರ ಪರ ಇದೆ..? ಯಾರ ಪರ ಕೆಲಸ ಮಾಡುತ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd