BIGGBOSS 8 : ದೊಡ್ಮನೆಯಲ್ಲಿ ಬರೀ ಪ್ರಶಾಂತ್ ಸಂಬರಗಿಯದ್ದೇ ಮಾತು..!
ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಚನ್ನಪಪ ಅವರನ್ನ ಬಿಟ್ಟು ಹೆಚ್ಚಾಗಿ ನೆಗೆಟಿವ್ ಆಗಿಯೇ ಹೈಲೆಟ್ ಆಗಿರೋ ಕಂಟೆಸ್ಟೆಂಟ್ ಅಂದ್ರೆ ಪ್ರಶಾಂತ್ ಸಂಬರಗಿ. ಮನೆಯ ಸದಸ್ಯರು ಪ್ರಶಾಂತ್ ಸಂಬರಗಿ ಬೆನ್ನ ಹಿಂದೆ ಅವರ ವಿರುದ್ಧ ಮಾತನಾಡಿಕೊಳ್ಳುವುದೇ ಹೆಚ್ಚು. ಇತ್ತೀಚೆಗೆ ಕಿಚನ್ ನಲ್ಲಿ ರಘು, ನಿಧಿ , ಶುಭಾ ಪುಂಜಾ ಪ್ರಶಾಂತ್ ಸಂಬರಗಿ ಬಗ್ಗೆ ಮಾತನಾಡಿದ್ದರು. ಈ ವೇಳೆ ನಿಧಿ ಸಂಬರಗಿಯನ್ನ ದಡ್ಡ ಎಂದಿದ್ದರು.
ಹೀಗೆ ದಿನೇ ದಿನೇ ಪ್ರಶಾಂತ್ ಸಂಬರಗಿ ವಿರುದ್ಧ ಸ್ಪರ್ಧಿಗಳಲ್ಲಿ ಅಮಸಾಧಾನ ಮೂಡುತ್ತಿದೆ. ಸಂಬರಗಿ ಮನೆ ಮಂದಿಯ ಚರ್ಚಾ ಟಾಪಿಕ್ ಆಗಿದ್ದಾರೆ. ನಿನ್ನೆ ಎಪಿಸೋಡ್ ನಲ್ಲಿ ಅರವಿಂದ್ ,ವಿಶ್ವನಾಥ್, ರಘು ಮೂವರೂ ಸಂಬರಗಿಯ ಬಗ್ಗೆ ಮಾತನಾಡಿದ್ದಾರೆ.
ಸಂಬರಗಿ ತಮಗೆ ಬೇಕಾಗಿದ್ದನ್ನ ಮಾಡ್ತಾರೆ. ಇಲ್ಲ ಅಂದ್ರೆ ಆಗಲ್ಲ ಗುರು ಅಂತ ಹೇಳ್ತಾರೆ. ತಾವು ಏನೇ ಕೆಲಸ ಮಾಡಿದ್ರೂ ಎಲ್ಲರಿಗೂ ತಿಳಿಯುವಂತೆ ಹೇಳೋದು ಅವರ ನಡವಳಿಕೆ. ಊಟ, ಟೀ ತಂದಾಗಲೂ ಅದನ್ನ ಪದೇ ಪದೇ ಹೇಳ್ತಾರೆ ಎಂದು ಮೂವರು ಮಾತನಾಡಿಕೊಂಡಿದ್ದಾರೆ.
ಅಲ್ಲದೇ ನಮ್ಮ ತಾಯಿಯ ವಿಷಯ ಹೇಳಿದಾಗ ರಘು ತಬ್ಬಲಿ ಅಲ್ಲ. ನಾವೆಲ್ಲ ಅವನ ಜೊತೆಯಲ್ಲಿದ್ದೇವೆ ಎಂದು ಸಂಬರಗಿ ಹೇಳಿದಾಗ ಬೇಜಾರ ಆಯ್ತು. ನಾನು ಯಾವಾಗಾದ್ರೂ ತಬ್ಬಲಿ ಅಂತ ಯಾರಿಗಾದ್ರೂ ಹೇಳಿದ್ನಾ. ಏನೇ ಮಾತಾಡಿದ್ರೂ ಸಂಬರಗಿ ಅವರು ಅದನ್ನ ಕಂಟೆಂಟ್ ತರ ನೋಡ್ತಾರೆ. ಯಾವುದೇ ಟಾಪಿಕ್ ಬಂದ್ರೂ ನಂದೆಲ್ಲಿಡಲಿ ಅನ್ನೋ ಜಾಯಮಾನ ಅವರದ್ದು ಅಂತ ಕಿಡಿಕಾರಿದ್ದಾರೆ. ಒಟ್ಟಾರೆ ಪ್ರಸಾಂತ್ ಸಂಬರಗಿ ಸದ್ಯಕ್ಕೆ ಮನೆಯ ಮೇಯಿನ್ ಫೋಕಸ್ ಆಗಿರೋದಂತು ಸುಳ್ಳಲ್ಲ. ಬಹುತೇಕ ಮನೆಯ ಎಲ್ಲರಿಗೂ ಸಂಬರಗಿ ವಿರುದ್ಧ ನೆಗೆಟಿವ್ ಒಪಿನಿಯನ್ ಇದೆ ಅನ್ನೋದು ಕೂಡ ಎಪಿಸೋಡ್ ಗಳಲ್ಲಿ ಸ್ಪಷ್ಟವಾಗಿ ಗೊತ್ತಾಗ್ತಿದೆ.
ವಿಜಯ್ ಸಿನಿಮಾದಿಂದ ರಶ್ಮಿಕಾಗೆ ಗೇಟ್ ಪಾಸ್ – ಕನ್ನಡದ ಪೂಜಾ ಹೆಗ್ಡೆಗೆ ಚಾನ್ಸ್..!
ಕಾರ್ತಿಯ ‘ಸುಲ್ತಾನ’ದಲ್ಲಿ ಕೆಜಿಎಫ್ ಗರುಡನ ಅಬ್ಬರ..!