ಮಾಸ್ಕ್ ವಿಚಾರಕ್ಕೆ ಆಟೋ ಚಾಲಕನನ್ನ ನಡುರಸ್ತೆಯಲ್ಲಿ ಅಮಾನುಷವಾಗಿ ಬಟ್ಟೆ ಹರಿದು, ಎಳೆದಾಡಿ ಥಳಿಸಿದ ಪೊಲೀಸರು…. VIDEO VIRAl   

1 min read

ಮಾಸ್ಕ್ ವಿಚಾರಕ್ಕೆ ಆಟೋ ಚಾಲಕನನ್ನ ನಡುರಸ್ತೆಯಲ್ಲಿ ಅಮಾನುಷವಾಗಿ ಬಟ್ಟೆ ಹರಿದು, ಎಳೆದಾಡಿ ಥಳಿಸಿದ ಪೊಲೀಸರು…. VIDEO VIRAl

ಮಧ್ಯಪ್ರದೇಶ : ಸರಿಯಾಗಗಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಮೃಗಗಳ ರೀತಿ ಆಟೋ ಚಾಲಕನ ಮೇಲೆ ಎರಗಿಬಿದ್ದಿರುವ ಅಮಾನುಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ವರ್ತನೆ ವಿರುದ್ಧ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ.

ಇಬ್ಬರು ಪೊಲೀಸರು ಓರ್ವ ಆಟೋ ಚಾಲಕನನ್ನ ರಸ್ತೆಯಲ್ಲಿ ಎಳೆದಾಡಿ ಬಟ್ಟೆ ಹರಿದು ನಾಯಿಯ ರೀತಿಯಲ್ಲಿ ಆ ವ್ಯಕ್ತಿಯನ್ನ ಥಳಿಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ಇದರ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

35 ವರ್ಷದ ಆಟೋ ರಿಕ್ಷಾ ಚಾಲಕ ಕೃಷ್ಣ ಅವರು ಆಸ್ಪತ್ರೆಯಲ್ಲಿರುವ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಮಾಸ್ಕ್ ಮುಗಿನ ಬಳಿ ಜಾರಿಬಂದಿತ್ತು. ಇದನ್ನು ಗಮನಿಸಿದ ಇಬ್ಬರು ಪೊಲೀಸರು ಆತನನ್ನು ರಸ್ತೆಯಲ್ಲಿ ತಡೆದು ಪೊಲೀಸ್ ಠಾಣೆಗೆ ಬರಬೇಕೆಂದು ಒತ್ತಾಯಿಸಿದರು. ರಿಕ್ಷಾ ಚಾಲಕ ಇದಕ್ಕೆ ನಿರಾಕರಿಸಿದಾಗ ಹೀಗೆ ಮೃಗಗಳ ರೀತಿ ವರ್ತಿಸಿದ್ದಾರೆ ಎನ್ನಲಾಗಿದೆ.

ವೈರಲ್ ವಿಡಿಯೋದಲ್ಲಿ ಆಟೋ ಚಾಲಕನಿಗೆ ಪೊಲಿಸರು ಹೊಡೆಯುತ್ತಿದ್ದರೆ, ಚಾಲಕನ ಮಗ ರಸ್ತೆಯಲ್ಲಿ ಅಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಮನಕಲಕುವಂತಿದೆ.

ಕಾಂಗ್ರೆಸ್ ನಾಯಕ  ಗೌರವ್ ಪಾಂಡಿ ಅವರು ಈ ವಿಡಿಯೋ ಶೇರ್ ಮಾಡಿ, ‘ ನಾಚಿಕೆಗೇಡು.. ಇದೇ ರೀತಿ ಬಿಜೆಪಿ ನಾಯಕರು , ಮೋದಿ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದಿದ್ರೆ ಆಗ ಪೊಲೀಸರು ಹೇಗೆ ವರ್ತಿಸುತ್ತಿದ್ದರು’ ಎಂದು ಕಿಡಿಕಾರಿದ್ದಾರೆ.

ಥಳಿಸಿರುವ ಪೊಲೀಸರಿಬ್ಬರನ್ನು ಕಮಲ್ ಪ್ರಜಾಪತ್ ಹಾಗೂ ಧರ್ಮೇಂದ್ರ ಜಾಟ್ ಎಂದು ಗುರುತಿಸಲಾಗಿದೆ. ಆದ್ರೆ ಈವರೆಗೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ಇಬ್ಬರನ್ನೂ ಅಮಾನತುಗೊಳಿಸುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd