ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ನನ್ನ ಗುರಿ ಮತ್ತು ಕನಸು – ವೇಗಿ ಇಶಾನ್ ಪೊರೆಲ್

admin by admin
April 5, 2021
in IPL 2021, Newsbeat, ಐಪಿಎಲ್ 2021
ishan porel virat kohli rohith sharma ipl 2021 saakshatv
Share on FacebookShare on TwitterShare on WhatsappShare on Telegram

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದೇ ನನ್ನ ಗುರಿ ಮತ್ತು ಕನಸು – ವೇಗಿ ಇಶಾನ್ ಪೊರೆಲ್

ishan porel bengal punjab kings saakshatvವಿರಾಟ್ ಕೊಹ್ಲಿ… ವಿಶ್ವದ ಶ್ರೇಷ್ಠ ಕ್ರಿಕೆಟಿಗ. ರನ್ ಮೇಷಿನ್ ನಂತೆ ರನ್ ದಾಖಲಿಸುವ ವಿರಾಟ್ ಕೊಹ್ಲಿ ಎದುರಾಳಿ ತಂಡದ ಬೌಲರ್ ಗಳನ್ನು ದುಃಶ್ವಪ್ನವಾಗಿ ಕಾಡುತ್ತಾರೆ.
ಕೊಹ್ಲಿ ಕ್ರೀಸ್ ನಲ್ಲಿ ಇದ್ದಷ್ಟು ಸಮಯ ಬೌಲರ್ ಗಳಿಗೆ ತಲೆನೋವು ಜಾಸ್ತಿ. ಹಾಗಾಗಿ ಕೊಹ್ಲಿ ಪಡೆಯುವುದೇ ಎದುರಾಳಿ ತಂಡದ ಮುಖ್ಯ ಗುರಿಯಾಗಿರುತ್ತೆ.
ಇದೀಗ ಐಪಿಎಲ್ ಶುರುವಾಗುತ್ತಿದೆ. ಬಂಗಾಳದ ವೇಗಿ ಇಶಾನ್ ಪೊರೆಲ್ ಅವರು ಪ್ರೀತಿಯಿಂದಲೇ ವಿರಾಟ್ ಕೊಹ್ಲಿಗೆ ಸವಾಲು ಹಾಕಿದ್ದಾರೆ.
ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅತ್ಯದ್ಭುತ ಆಟಗಾರ. ವಿಶ್ವದ ನಂಬರ್ ವನ್ ಕ್ರಿಕೆಟಿಗ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯವರ ವಿಕೆಟ್ ಪಡೆಯುವುದು ನನ್ನ ಕನಸು ಅಂತ ಪಂಜಾಬ್ ಕಿಂಗ್ಸ್ ತಂಡದ ವೇಗಿ ಇಶಾನ್ ಪೊರೆಲ್ ಹೇಳಿದ್ದಾರೆ.
ಹಾಗಿದ್ರೆ ವಿರಾಟ್ ಕೊಹ್ಲಿಯವರ ವಿಕೆಟ್ ಪಡೆಯುವ ಕನಸು ಕಾಣುತ್ತಿರುವ ಇಶಾನ್ ಪೊರೆಲ್ ಯಾರು ? ಈ ಪ್ರಶ್ನೆಗೆ ಉತ್ತರ ಪಶ್ವಿಮ ಬಂಗಾಳ ತಂಡದ ಹಾಗೂ ಐಪಿಎಲ್ ನಲ್ಲಿ ಪಂಜಾಬ್ ತಂಡದ ಯುವ ವೇಗಿ ಇಶಾನ್ ಪೊರೆಲ್.
ಪ್ರಥಮ ದರ್ಜೆಯ ಪಂದ್ಯದಲ್ಲಿ ಇಶಾನ್ ಅವರು 20 ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದಾರೆ. ಹಾಗೇ 25 ಲೀಸ್ಟ್ ಎ ಪಂದ್ಯಗಳಲ್ಲಿ 41 ವಿಕೆಟ್ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದಾರೆ. 2017ರಿಂದ ಪಶ್ವಿಮ ಬಂಗಾಳ ತಂಡವನ್ನು ರಣಜಿ ಟೂರ್ನಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಇಶಾನ್ ಪೊರೆಲ್ ಅವರು ನಾಲ್ಕು ಮಂದಿ ನೆಟ್ ಬೌಲರ್ ಗಳಲ್ಲಿ ಒಬ್ಬರಾಗಿದ್ದರು. ಆದ್ರೆ ಇಶಾನ್ ಗಾಯದಿಂದಾಗಿ ಮತ್ತೆ ವಾಪಾಸ್ ಭಾರತಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ವಿಜಯ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದರು. ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯ ಐದು ಪಂದ್ಯಗಳಲ್ಲಿ ಇಶಾನ್ 13 ವಿಕೆಟ್ ಉರುಳಿಸಿದ್ದರು.
ಆಸ್ಟ್ರೇಲಿಯಾ ಸರಣಿಯ ನೆಟ್ಸ್ ನಲ್ಲಿ ನಾನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಿದ್ದೇನೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳಿಗೆ ಬೌಲಿಂಗ್ ಮಾಡಿರುವುದು ಹೆಮ್ಮೆ ಅನ್ನಿಸುತ್ತಿದೆ. ಅಲ್ಲದೆ ಸಾಕಷ್ಟು ಕಲಿಯಲು ಕೂಡ ಸಾಧ್ಯವಾಯ್ತು. ರಣಜಿ ಪಂದ್ಯವೊಂದರಲ್ಲಿ ನಾನು ಕೆ.ಎಲ್. ರಾಹುಲ್ ಭಾಯ್ ಅವರ ವಿಕೆಟ್ ಪಡೆದಿದ್ದೆ ಅಂತಾರೆ ಇಶಾನ್ ಪೊರೆಲ್.
ಇನ್ನು ಐಪಿಎಲ್ ನಲ್ಲಿ ನಿಮ್ಮ ಕನಸಿನ ವಿಕೆಟ್ ಯಾರದ್ದು ಅನ್ನೋ ಪ್ರಶ್ನೆಗೆ ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ರು. ಯಾಕಂದ್ರೆ, ವಿರಾಟ್ ನಂಬರ್ ವನ್ ಬ್ಯಾಟ್ಸ್ ಮೆನ್. ಅವರ ವಿಕೆಟ್ ಪಡೆಯುವುದು ಕನಸು ಅಂತ ಹೇಳ್ತಾರೆ.
ಇನ್ನು ಇಶಾನ್ ಪೊರೆಲ್ ಸ್ವಲ್ಪ ನತದೃಷ್ಟ ಅಂತನೇ ಹೇಳಬಹುದು. ಗಾಯಗೊಳ್ಳದೇ ಇರುತ್ತಿದ್ರೆ ಟೀಮ್ ಇಂಡಿಯಾಗೂ ಎಂಟ್ರಿಕೊಡುತ್ತಿದ್ರೋ ಏನೋ.. ಯಾಕಂದ್ರೆ, ಆಸ್ಟ್ರೇಲಿಯಾ ಸರಣಿಯ ವೇಳೆ ಭಾರತದ 11 ಮಂದಿ ಆಟಗಾರರು ಗಾಯಗೊಂಡಿದ್ದರು. ಈ ವೇಳೆ ಮಹಮ್ಮದ್ ಸಿರಾಜ್, ನಟರಾಜನ್, ಶಾರ್ದೂಲ್ ಥಾಕೂರ್, ಬಳಿಕ ishan porel bengal punjab kings saakshatvಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.

Related posts

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

February 15, 2026
ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

February 15, 2026
Tags: 'Ishan Porel#saakshatvBengalIPLipl 2021mumbai indianspunjab kingsRCBrohith sharmavirat kohli
ShareTweetSendShare
Join us on:

Related Posts

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

by Shwetha
February 15, 2026
0

ಕರ್ನಾಟಕಾ ರಾಜ್ಯ ಸರ್ಕಾರವು ಬಡವರು ಮತ್ತು ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ಕ್ರಾಂತಿಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಬಿಪಿಎಲ್ ಕಾರ್ಡ್ ದಾರರು ಮತ್ತು ಸರ್ಕಾರಿ ನೌಕರರು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 15, 2026
0

ದಿನ ಭವಿಷ್ಯ: 15-02-2026 1. ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವ ದಿನವಾಗಿದೆ. ಸರ್ಕಾರಿ ಕೆಲಸಗಳಲ್ಲಿ ಅಥವಾ ಮೇಲಾಧಿಕಾರಿಗಳ ಜೊತೆಗಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಕೋಪವನ್ನು...

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
February 14, 2026
0

ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram