ಸಲೆಬ್ರಿಟಿ ಜೋಡಿ ಅನುಷ್ಕಾ ಶರ್ಮಾ , ವಿರಾಟ್ ಕೊಹ್ಲಿ ಇಬ್ಬರೂ ಕೂಡ ಇತ್ತೀಚೆಗೆ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಕೊಂಚ ಫ್ರೀ ಆಗಿ ಒಟ್ಟಾಗಿ ಸಮಯ ಕಳೆದಿದ್ದಾರೆ.. ಆದ್ರೆ ಇವರೆಲ್ಲೋ ವಿದೇಶ ಹೋಗಿಯೋ ರೆಸಾರ್ಟ್ ನಲ್ಲಿಯೋ ವಿರಮಿಸಿಲ್ಲ.. ಬದಲಾಗಿ ಮುಂಬೈನ ಬೀದಿ ಬೀದಿಗಳಲ್ಲಿ ಬೈಕ್ ನಲ್ಲಿ ಸಾಮಾನ್ಯರಂತೆ ಸುತ್ತಾಡಿದ್ದು , ಈ ಜೋಡಿಯೋ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಇಬ್ಬರೂ ತಲೆಗೆ ಹೆಲ್ಮೆಟ್ ಗಳನ್ನ ಧರಿಸಿ ಸಂಪೂರ್ಣವಾಗಿ ಕವರ್ ಮಾಡಿಕೊಂಡಿದ್ದರೂ ಅನೇಕರು ಈ ಇಬ್ಬರನ್ನ ಕಂಡು ಹಿಡಿದಿದ್ದು , ಇವರ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ವಿರಾಟ್ ಕಪ್ಪು ಪ್ಯಾಂಟ್ ಹಸಿರು ಶರ್ಟ್ ಧರಿಸಿದ್ದರು.. ಅನುಷ್ಕಾ ಸಂಪೂರ್ಣ ಕಪ್ಪು ಶರ್ಟ್ ಪ್ಯಾಂಟ್ ನಲ್ಲಿ ಕಾಣಿಸಿಕೊಂಡರು… ಇಬ್ಬರೂ ಸಹ ಬಿಳಿ ಸ್ನೀಕರ್ಸ್ ಮತ್ತು ಕಪ್ಪು ಹೆಲ್ಮೆಟ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ..
View this post on Instagram