Virat Kohli | ಬಂದೇ ಬಿಟ್ಟ ವಿರಾಟ್… ಕಾರಣ ಏನು ?
ವಿರಾಟ್ ಕೊಹ್ಲಿ ಏಷ್ಯಾ ಕಪ್ ಆಡಲ್ವಂತೆ.. ? ಬ್ಯಾಡ್ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಟೀಂ ಇಂಡಿಯಾದಿಂದ ಕೋಕ್ ಕೊಡ್ತಾರಂತೆ.
ಅಯ್ಯೋ ಏಷ್ಯಾಕಪ್ ಆಡಲ್ಲ ಅಂತಾ ಸ್ವತಃ ವಿರಾಟ್ ಕೊಹ್ಲಿಯೇ ಹೇಳಿದ್ದಾರಂತೆ. ಈ ಎಲ್ಲಾ ಅಂತೆ ಕಂತೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಎಲ್ಲಾ ಊಹಾಪೋಹಗಳಿಗೆ ಚೆಕ್ ಮೇಟ್ ಇಡುತ್ತಾ ಟೀಂ ಇಂಡಿಯಾದ ಆಯ್ಕೆ ಸಮಿತಿ ಸೋಮವಾರ ರಾತ್ರಿ ಏಷ್ಯಾಕಪ್ ಗಾಗಿ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಕಿಂಗ್ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಹೌದು..! ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿ ಇದ್ದರೂ ಅವರೇ ಮಾತು.. ಫಾರ್ಮ್ ನಲ್ಲಿ ಇಲ್ಲದೇ ಇದ್ದರೂ ಅವರದ್ದೇ ಮಾತು.. ಕೊಹ್ಲಿ ಫಾರ್ಮ್ ನಲ್ಲಿದ್ದಾಗ ದಾಖಲೆಗಳ ಬಗ್ಗೆ ಮಾತನಾಡುತ್ತಿದ್ದವರು, ಈಗ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರಂತೂ ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡಬೇಕು ಅಂತಾ ನೇರವಾಗಿಯೇ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಕಾರಣ ಕೂಡ ಇದೆ. ಅದು ಏನಂದರೇ ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಮೊದಲಿನ ಟಚ್ ನಲ್ಲಿ ಕಾಣಿಸಿಕೊಂಡಿಲ್ಲ. ಒಂದೇ ಒಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿಲ್ಲ.
ಟೀಂ ಇಂಡಿಯಾದ ಪರ ಆರ್ಭಟಿಸದ ವಿರಾಟ್ ಕೊಹ್ಲಿ, ಐಪಿಎಲ್ ನಲ್ಲೂ ಅಬ್ಬರಿಸದೇ ನಿರಾಸೆ ಮೂಡಿಸಿದ್ದರು. ಇದಾದ ಬಳಿಕ ನಡೆದ ಇಂಗ್ಲೆಂಡ್ ಸರಣಿಯಲ್ಲೂ ಕೂಡ ಸದ್ದು ಮಾಡಲೇ ಇಲ್ಲ.
ಇದೇ ಸಮಯದಲ್ಲಿ ಅವರನ್ನು ವಿಶ್ರಾಂತಿ ನೆಪದಲ್ಲಿ ತಂಡದಿಂದ ದೂರ ಇರಿಸಲಾಗಿತ್ತು. ಹಾಗೇ ಯುವಕರಿಗೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಯುವಕರು ಸಿಕ್ಕಾವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು.
ಹೀಗಾಗಿ ಸಾಮಾನ್ಯವಾಗಿಯೇ ವಿರಾಟ್ ಕೊಹ್ಲಿ ಕಥೆ ಮುಗೀತು ಅಂತಾ ಹೇಳಿದವರೇ ಹೆಚ್ಚು. ಅದರಲ್ಲೂ ಭಾರತ ಟಿ 20 ತಂಡಕ್ಕೆ ಅವರು ಮತ್ತೆ ವಾಪಸ್ ಆಗೋದು ಕಷ್ಟ ಅಂತಾ ಎಲ್ಲರೂ ಭಾವಿಸಿದ್ದರು.
ಆದ್ರೆ ಬಿಸಿಸಿಐ ಬಿಗ್ ಬಾಸ್ ಗಳು ಮುಂದಿನ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿಗೆ ಮಣೆ ಹಾಕಿದೆ.
ಇದೇ 27 ರಿಂದ ಯುಎಇ ನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಗೆ ವಿರಾಟ್ ಕೊಹ್ಲಿ ತಂಡ ಸೇರಿಕೊಂಡಿದ್ದಾರೆ. ಆ ಮೂಲಕ ಕೆಲವು ದಿನಗಳಿಂದ ಮೂಡಿದ್ದ ಪ್ರಶ್ನೆಗಳಿಗೆ. ಚರ್ಚೆಗಳಿಗೆ ಉತ್ತರ ಸಿಕ್ಕಿದೆ.








