Virat | ಬ್ಯಾಡ್ ಫಾರ್ಮ್ ಅಲ್ಲ ಬ್ಯಾಡ್ ಟೈಂನಲ್ಲಿ ವಿರಾಟ್
ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೀ ಪ್ಲೇಯರ್. ಆರ್ ಸಿಬಿ ತಂಡಕ್ಕೆ ಈ ಮಟ್ಟಿಗೆ ಅಭಿಮಾನಿಗಳ ಬಳಗ ಇರೋಕೆ ವಿರಾಟ್ ಕೊಹ್ಲಿ ಕೂಡ ಪ್ರಮುಖ ಕಾರಣ.
ಆರ್ ಸಿಬಿ ಅಭಿಮಾನಿಗಳು ವಿರಾಟ್ ಮತ್ತುಆರ್ ಸಿಬಿ ತಂಡವನ್ನು ಬೇರೆ ಬೇರೆಯಾಗಿ ನೋಡೋಕೆ ಇಷ್ಟ ಪಡೋದಿಲ್ಲ. ಯಾಕಂದರೇ ವಿರಾಟ್ ಕೊಹ್ಲಿ ಆರ್ ಸಿಬಿಯಲ್ಲಿ ಬೆಳೆದು ಸ್ಟಾರ್ ಆದ ಸೂಪರ್ ಸ್ಟಾರ್..!!
ವಿರಾಟ್ ಕೊಹ್ಲಿ ಆರ್ ಸಿಬಿಗೆ ನಾಯಕರಾಗಿ ಕಪ್ ಗೆಲ್ಲಿಸದೇ ಇದ್ದರೂ ಅವರ ನಾಯಕತ್ವದಲ್ಲಿ ಸಾಕಷ್ಟು ಅವಿಸ್ಮರಣೀಯ ಪಂದ್ಯಗಳನ್ನು ತಂಡ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ ಒಂಟಿ ಸಲಗದಂತೆ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ಆದ್ರೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಸದ್ದು ಮಾಡುತ್ತಲೇ ಇಲ್ಲ. ಆಡಿರುವ ಏಳು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರೋದು ಕೇವಲ 119 ರನ್ ಮಾತ್ರ. ಅದರಲ್ಲೂ ಒಂದು ಬಾರಿ ಗೋಲ್ಡನ್ ಡಕ್.
ಹೀಗಾಗಿ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿರಾಟ್ ಕೊಹ್ಲಿ ಪವರ್ ಮುಗಿದಿದೆ. ಅವರು ಫಾರ್ಮ್ ನಲ್ಲಿಲ್ಲ. ನಾಯಕತ್ವದಿಂದ ಕೆಳಗಿಳಿದ ಮೇಲೆ ಅವರು ಜವಾಬ್ದಾರಿ ಮರೆತಿದ್ದಾರೆ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಮಂದಿ ವಿರಾಟ್ ಕೊಹ್ಲಿ ಅವರನ್ನ ತಂಡದಿಂದ ಕೈ ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಅಂತಾನೂ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ವಿರಾಟ್ ಕೊಹ್ಲಿ ಅವರನ್ನು ಟೀಕೆ ಮಾಡುತ್ತಾ, ಟ್ರೋಲ್ ಮಾಡುತ್ತಿರುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಆದ್ರೆ ಹೀಗೆ ಟೀಕೆ, ಟ್ರೋಲ್ ಮಾಡುತ್ತಿರುವವರಿಗೆ ಆರ್ ಸಿಬಿ ಅಭಿಮಾನಿಗಳು ಸಖತ್ ಆಗಿಯೇ ಉತ್ತರ ಕೊಡುತ್ತಿದ್ದಾರೆ.
ಅಂದಹಾಗೆ ಇಲ್ಲಿ ಗಮನಿಸಬೇಕಾದ ಸಂಗತಿ ಏನಂದರೇ ವಿರಾಟ್ ಕೊಹ್ಲಿ ಬ್ಯಾಡ್ ಫಾರ್ಮ್ ನಲ್ಲಿ ಇಲ್ಲ. ಅವರು ಬ್ಯಾಡ್ ಲಕ್ ನಲ್ಲಿದ್ದಾರೆ.
ಹೌದು..!! ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಕೆಕೆಆರ್ ವಿರುದ್ಧ ಅಂಪೈರ್ ಎಡವಟ್ಟಿನಿಂದ 12 ರನ್ ಗಳಿಗೆ ಔಟ್ ಆದರು. ರಾಯಲ್ಸ್ ವಿರುದ್ಧ ವಿರಾಟ್ ರನ್ ಔಟ್ ಆದರು. ಮುಂಬೈ ವಿರುದ್ಧ 48 ರನ್ ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಡೆಲ್ಲಿ ವಿರುದ್ಧ ಮತ್ತೆ ರನ್ ಔಟ್ ಆದರು.
ಹೀಗೆ ಏಳು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಂದು ಬಾರಿ ಅಂಪೈರ್ ಎಡವಟ್ಟು, ಎರಡು ಬಾರಿ ಅನಿರೀಕ್ಷಿತ ರನ್ ಔಟ್ ಗೆ ಬಲಿಯಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇಲ್ಲಿ ಅವರು ಫಾರ್ಮ್ ನಲ್ಲಿಲ್ಲ ಅನ್ನೋದಕ್ಕಿಂತ ಬ್ಯಾಡ್ ಟೈಮ್ ನಲ್ಲಿದ್ದಾರೆ ಅನ್ನೋದನ್ನ ಮುಖ್ಯವಾಗಿ ಗಮನಿಸಬೇಕು. ಆದ್ರೂ ವಿರಾಟ್ ಕೊಹ್ಲಿ ಅವರಂತಹ ಆಟಗಾರರಿಗೆ ಇಂತಹ ಟೀಕೆಗಳು ಹೊಸದೇನು ಅಲ್ಲ. ಈ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಬ್ಯಾಟ್ ನಿಂದಲೇ ಉತ್ತರಿಸೋದು ವಿರಾಟ್ ಕೊಹ್ಲಿಗೆ ಚೆನ್ನಾಗಿ ತಿಳಿದಿದೆ.
ಅಂದಹಾಗೆ ಕೊನೆಯಲ್ಲಿ ಒಂದು ಮಾತು ಹೇಗೆ ಆರ್ ಸಿಬಿ ತಂಡ ಗೆಲ್ಲಲಿ ಬಿಡಲಿ.. ಈ ಸಲ ಕಮ್ ನಮ್ದೆ ಅಂತಾ ಅಭಿಮಾನಿಗಳು ಹೇಳ್ತಾರೋ.. ಅದೇ ರೀತಿ ವಿರಾಟ್ ಕೊಹ್ಲಿ ರನ್ ಗಳಿಸಲಿ ಬಿಡಲಿ.. ಕೊಹ್ಲಿಯನ್ನ ಆರ್ ಸಿಬಿಯನ್ಸ್ ಬಿಟ್ಟು ಕೊಡೋದೆ ಇಲ್ಲ. virat kohli bad form in ipl 2022