ಒತ್ತಡದಲ್ಲಿ VIRAT.. ಪ್ರಾಕ್ಟಿಸ್ ವೇಳೆ 6 ಬಾರಿ ಕ್ಲೀನ್ ಬೌಲ್ಡ್
ರನ್ ಮಷಿನ್ ಕೊಹ್ಲಿ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತುಸು ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ.
ಯಾಕಂದರೇ ಲಂಕಾ ವಿರುದ್ಧದ ಪಂದ್ಯ ಹಿನ್ನೆಲೆಯಲ್ಲಿ ಮೊಹಾಲಿಗೆ ನಾಲ್ಕು ದಿನಗಳ ಮುಂಚೆಯೇ ಬಂದಿದ್ದ ವಿರಾಟ್ ನೆಟ್ಸ್ ಗಳಲ್ಲಿ ಬೆವರು ಹರಿಸುತ್ತಿದ್ದಾರೆ.
ಇಂದಿನ ಅಭ್ಯಾಸದ ವೇಳೆ ಕೊಹ್ಲಿ ನೆಟ್ಸ್‌ನಲ್ಲಿ ಸತತ ಆರು ಬಾರಿ ಬೌಲ್ಡ್ ಆಗಿದ್ದಾರೆ ಎಂದು ವರದಿಯಾಗಿದೆ.
ಹೀಗಾಗಿ ನೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸಿ ಮೂರು ವರ್ಷಗಳು ಕಳೆಯುತ್ತಿವೆ. ಹೀಗಾಗಿ ನೂರನೇ ಪಂದ್ಯದಲ್ಲಿ ಶತಕ ಸಿಡಿಸಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಅಲ್ಲದೇ ನೂರನೇ ಟೆಸ್ಟ್ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿಗೆ ದಿಗ್ಗಜ ಕ್ರಿಕೆಟರ್ ಗಳು ಶುಭ ಕೋರಿದ್ದಾರೆ. Virat kohli-bowled-out-6-times-during-practice