ಕೊಹ್ಲಿ ಫಾರ್ಮ್ ವಿಚಾರ – ವಿರಾಟ್ ಬೆನ್ನಿಗೆ ನಿಂತ ಚಾಹಲ್…
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಶತಕ ಮಾತ್ರ ಮುಖ್ಯವಲ್ಲ, ಅವರು ಅನೇಕ ಮಹತ್ವದ ಕೊಡುಗೆಗಳನ್ನ ನೀಡಿದ್ದಾರೆ ಎಂದು ಯಜುವೇಂದ್ರ ಚಾಹಲ್ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಮಾತನಾಡಿದ ಚಾಹಲ್ ನಾವು ಅವರ ಶತಕಗಳ ಬಗ್ಗೆ ಮಾತ್ರ ಯೋಚಿಸುತ್ತೇವೆ ಆತನ 60 70 ರನ್ ಗಳ ಕೊಡುಗೆ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. ಕಳೆದ ಸಾವಿರ ದಿನಗ ಗಳಿಂದ ವಿರಾಟ್ ಕೊಹ್ಲಿ ಶತಕ ಗಳಿಸಿಲ್ಲ ಆದರೆ ಹಲವು ಭಾರಿ ಅರ್ಧಶತಕ ಗಳಿಸಿದ್ದಾರೆ. ಆದರೂ ಕೊಹ್ಲಿ ಟೀಕೆಗೆ ಗುರಿಯಾಗುತ್ತಾರೆ.
ಯೂಟ್ಯೂಬ್ ಚಾನೆಲ್ ನೊಂದಿಗೆ ಮಾತನಾಡಿದ ಚಾಹಲ್ , 15 – 20 ರನ್ ಗಳಿಸದ ನಂಥರ ಯಾವ ಬೌಲರ್ ಕೂಡ ಕೊಹ್ಲಿಗೆ ಬೌಲಿಂಗ್ ಮಾಡಲು ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
T20 ಫಾರ್ಮೇಟ್ ನಲ್ಲಿ ಒಬ್ಬ ಆಟಗಾರ ಸರಾಸರಿ 50+ ರನ್ ರೇಟ್ ಹೊಂದಿದ್ದರೆ ಮತ್ತು 2 ಟಿ20 ವಿಶ್ವಕಪ್ ಗಳಲ್ಲಿ ಆತ ಮ್ಯನ್ ಆಫ್ ದ ಟೂರ್ನಿಮೆಂಟ್ ಪ್ರಶಸ್ತಿ ಪಡೆದಿದ್ದರೆ ಆತ ವಿಶ್ವಶ್ರೇಷ್ಠ ಆಟಗಾರ ಎಂದು ಚಾಹಲ್ ಹೇಳಿದ್ದಾರೆ.
ಕ್ಯಾಪ್ಟನ್ ಬದಲಾದರೂ ಪಾತ್ರ ಬದಲಾಗಲ್ಲ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಚಹಾಲ್, “ತಂಡದಲ್ಲಿ ನನ್ನ ಪಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ. ಇಬ್ಬರೂ ನನ್ನನ್ನು ವಿಕೆಟ್ ಟೇಕರ್ ಬೌಲರ್ ಆಗಿ ಬಳಸಿಕೊಳ್ಳುತ್ತಾರೆ. ನನಗೆ ಅವರೆಲ್ಲರೂ ಸಮಾನರು. ಬೌಲರ್ ಆಗಿ ನನಗೆ ಸ್ವಾತಂತ್ರ್ಯವಿದೆ. ಅವರು ಯಾವಾಗಲೂ ಇದಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ನಾನು ಬಯಸುತ್ತೇನೆ.