ಭಾರತ ಇಂಗ್ಲೆಂಡ್ 2ನೇ ಏಕದಿನ ಪಂದ್ಯ.. ಮತ್ತೊಂದು ದಾಖಲೆ ಬರೆದ ಕಿಂಗ್ ಕೊಹ್ಲಿ..!
Virat Kohli completes 10,000 ODI runs while batting at 3
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ದಾಹದಲ್ಲಿದ್ದಾರೆ. 2019ರ ನವೆಂಬರ್ ನಂತರ ವಿರಾಟ್ ಕೊಹ್ಲಿ ಶತಕ ದಾಖಲಿಸಿಲ್ಲ. ಹೀಗಾಗಿ ಕೊಹ್ಲಿ ಶತಕ ದಾಖಲಿಸುತತ್ತಾರೆ ಅಂತ ಅಂದುಕೊಂಡಿದ್ದರು ಅವರ ಅಭಿಮಾನಿಗಳು.
. ಆದ್ರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು. ಆದ್ರೂ ಸತತ ನಾಲ್ಕು ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿದ್ದ ಗೌರವಕ್ಕೆ ಪಾತ್ರರಾಗಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದರು. ಶತಕ ದಾಖಲಿಸುವ ಹಂಬಲದಲ್ಲೂ ಇದ್ರು. ಆದ್ರೆ ಆದಿಲ್ ರಶೀದ್ ಅದಕ್ಕೆ ಅವಕಾಶವನ್ನು ನೀಡಲಿಲ್ಲ. 66 ರನ್ ಗಳಿಸಿದ್ದಾಗ ವಿರಾಟ್ ಆದಿಲ್ ರಶೀದ್ ಎಸೆತದಲ್ಲಿ ಜೋಸ್ ಬಟ್ಲರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದ್ರು. ಅಂದ ಹಾಗೇ ಆದಿಲ್ ರಶೀದ್ ಅವರಿಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿರುವುದು ಇದು 9ನೇ ಬಾರಿ.
ಈ ಹಿಂದೆ ನ್ಯೂಜಿಲೆಂಡ್‍ನ ಟೀಮ್ ಸೌಥಿಗೆ ಕೊಹ್ಲಿ 10ಬಾರಿ ವಿಕೆಟ್ ಒಪ್ಪಿಸಿದ್ರೆ, ಜೇಮ್ಸ್ ಆಂಡರ್ಸನ್ ಮತ್ತು ಗ್ರೇಮ್ ಸ್ವಾನ್ ಅವರಿಗೆ ತಲಾ ಎಂಟು ಬಾರಿ ವಿಕೆಟ್ ಒಪ್ಪಿಸಿದ್ರು.
ಈ ನಡುವೆ, ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 10 ಸಾವಿರ ರನ್ ದಾಖಲಿಸಿದ್ದ ವಿಶ್ವದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ವಿರಾಟ್ ಕೊಹ್ಲಿ 190ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಮೂರನೇ ಕ್ರಮಾಂಕದಲ್ಲಿ 330 ಇನಿಂಗ್ಸ್ ಗಳಲ್ಲಿ 12,662 ರನ್ ದಾಖಲಿಸಿದ್ದಾರೆ.
ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ (9747 ರನ್). ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 7774 ರನ್ ಗಳಿಸಿದ್ದಾರೆ.
#ViratKohli #england #teamindia #saakshatv #sports #worldcricket #cricket #Ricky Ponting