100ನೇ ಪಂದ್ಯದಲ್ಲಿ 45ಕ್ಕೆ ಆಟ ಮುಗಿಸಿದ VIRAT KOHLI
ನೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 45 ರನ್ ಗಳಿಗೆ ಆಟ ಮುಗಿಸಿದ್ದಾರೆ. ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಭಾರತದ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್, ರೋಹಿತ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ರೋಹಿತ್ 29ರನ್, ಮಯಾಂಕ್ 33 ರನ್ ಗಳಿಸಿ ಔಟ್ ಆದರು. ಇದಾದ ಬಳಿಕ ಹನುಮಾ ವಿಹಾರಿ, ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಿದರು.
ಒಂದು ಕಡೆ ಹನುಮಾ ವಿಹಾರಿ ಅರ್ಧ ಶತಕ ಸಿಡಿಸಿದರು. ಇತ್ತ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದರು. ವಿರಾಟ್ ಕೊಹ್ಲಿ ಪಂದ್ಯದ 39ನೇ ಓವರ್ ನಲ್ಲಿ 8000 ಸಾವಿರ ರನ್ ಸಾಧನೆ ಮಾಡಿದರು.
ವಿಶ್ವಾ ಫರ್ನಾಂಡೋ ಎಸೆದ ಎರಡನೇ ಎಸೆತವನ್ನು ಡೀಪ್ ಪಾಯಿಂಟ್ ಗೆ ತಳ್ಳಿ ಒಂದು ರನ್ ಕದಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಡ್ರೆಸಿಂಗ್ ರೂಮ್ ನಲ್ಲಿ ಕುಳಿತಿದ್ದ ಸಹ ಆಟಗಾರರು ಚೇಸಿಂಗ್ ಸ್ಟಾರ್ ಸಾಧನೆಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಅಂದಹಾಗೆ ವಿರಾಟ್ ಗೆ ಇದು ನೂರನೇ ಟೆಸ್ಟ್ ಪಂದ್ಯವಾಗಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ವಿರಾಟ್ ಕೂಡ ಆರಂಭದಿಂದಲೂ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು.
ಆದ್ರೆ 76 ಎಸೆತಗಳಲ್ಲಿ 45 ರನ್ ಗಳಿದ್ದ ವೇಳೆ ಎಂಬುಲ್ಡೆನಿಯಾ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆಗಿ ಅರ್ಧಶತಕ ವಂಚಿತರಾದರು. ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನಲ್ಲಿ ನಾಲ್ಕು ಮನಮೋಹಕ ಬೌಂಡರಿಗಳಿವೆ. Virat Kohli falls for 45 in his 100th Test match in Mohali