Virat Kohli : ವಿರಾಟ್ ಕೊಹ್ಲಿ ಯಂತ್ರದಂತೆ : ರವಿಶಾಸ್ತ್ರಿ ಹೀಗೆ ಹೇಳಿದ್ಯಾಕೆ ?
ಇತ್ತೀಚೆಗೆ ನಾನು ವಿರಾಟ್ ಕೊಹ್ಲಿ ಜತೆ ಮಾತನಾಡಿಲ್ಲ. ಆದಾಗ್ಯೂ, ಶ್ರೇಷ್ಠ ಎಂದು ಕರೆಯಲ್ಪಡುವ ಆಟಗಾರರು ಸರಿಯಾದ ಸಮಯದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುತ್ತಾರೆ.
ಕೊಹ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಏಷ್ಯಾಕಪ್ ರೂಪದಲ್ಲಿ ಉತ್ತಮ ಅವಕಾಶವೊಂದು ಬಂದಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಹಾಫ್ ಸೆಂಚೂರಿ ಸಿಡಿಸಿದ್ರೆ ಸಾಕು ಅವರನ್ನ ವಿಮರ್ಶಿಸುವವರೇ ಮೆಚ್ಚಿಕೊಳ್ಳುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ರನ್ ಮಿಷನ್ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿರುವುದು ಗೊತ್ತಿರುವ ವಿಚಾರವೇ.
ವಿರಾಟ್ ಸೆಂಚೂರಿ ಬಾರಿಸಿ ಸಾವಿರಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ದೂರವಿಡಬೇಕು ಎಂದು ಕೆಲವರು ವಾದಿಸುತ್ತಿದ್ದರೇ ರೋಹಿತ್ ಶರ್ಮಾ, ಸೇರಿದಂತೆ ವಿದೇಶಿ ಸ್ಟಾರ್ ಆಟಗಾರರು ವಿರಾಟ್ ಗೆ ಬೆಂಬಲವಾಗಿದ್ದಾರೆ.
ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಈ ಹಿನ್ನೆಲೆಯಲ್ಲಿ ಅವರು ಖಂಡಿತವಾಗಿಯೂ ಫಾರ್ಮ್ ಗೆ ಮರಳುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಟಿ 20 ವಿಶ್ವಕಪ್ 2021ರಲ್ಲೂ ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಹಾಫ್ ಸೆಂಚೂರಿ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ರವಿಶಾಸ್ತ್ರಿ, ಕೊಹ್ಲಿಯಂತೆ ಫಿಟ್ ಆಗಿರುವ ಕ್ರಿಕೆಟಿಗ ಭಾರತ ತಂಡದಲ್ಲಿ ಮತ್ತೊಬ್ಬರಿಲ್ಲ.
ಆತ ಒಂದು ಯಂತ್ರ.. ಒಂದು ಬಾರಿ ಸಾಧಿಸಬೇಕು ಎಂದು ಗಟ್ಟಿಯಾಗಿ ಫಿಕ್ಸ್ ಆದರೇ ಹಿಂದುರುಗಿ ನೋಡುವುದೇ ಇಲ್ಲ. ಆತ ಫಾರ್ಮ್ ಗೆ ಬರೋದಕ್ಕೆ ಒಂದು ಇನ್ನಿಂಗ್ಸ್ ಸಾಕು ! ವಿರಾಟ್ ಈಗ ರನ್ ಗಳ ಹಸಿವಿನಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ಏಷ್ಯಾಕಪ್ ದೊಡ್ಡ ಅವಕಾಶವಾಗಿದೆ. ಪಾಕಿಸ್ತಾನ ವಿರುದ್ಧದ ಮ್ಯಾಚ್ ನಲ್ಲಿ ಅರ್ಧ ಶತಕ ಸಿಡಿಸಿದ್ರೆ ವಿಮರ್ಶಿಸುವವರು ಸುಮ್ಮನಾಗುತ್ತಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಇನ್ನು ಆಗಸ್ಟ್ 27 ರಿಂದ ಏಷ್ಯಾಕಪ್ ಟೂರ್ನಿ ಶುರುವಾಗಲಿದೆ. ಶ್ರೀಲಂಕಾ – ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಉದ್ಘಾಟನಾ ಪಂದ್ಯ ನಡೆಯಲಿದೆ. 28 ರಂದು ಇಂಡೋ – ಪಾಕ್ ನಡುವಿನ ಪಂದ್ಯ ನಡೆಯಲಿದೆ.