ಮಾಲ್ಡೀವ್ಸ್ ನಿಂದ ಬಂದ ಬಳಿಕ ವಿರಾಟ್ ಕೊಹ್ಲಿಗೂ ಬಂದಿತ್ತು ಕರೋನಾ ಪಾಸಿಟಿವ್…
1 min read
ಮಾಲ್ಡೀವ್ಸ್ ನಿಂದ ಬಂದ ಬಳಿಕ ವಿರಾಟ್ ಕೊಹ್ಲಿಗೂ ಬಂದಿತ್ತು ಕರೋನಾ ಪಾಸಿಟಿವ್…
ಇಂಗ್ಲೆಂಡ್ ವಿರುದ್ಧ ಐದನೇ ಮತ್ತು ಕೊನೆ ಟೆಸ್ಟ್ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡ ಸರ್ವ ಸಜ್ಜಾಗುತ್ತಿದೆ. ಇದಕ್ಕೂ ಮೊದಲು ಭಾರತ ತಂಡ ಜೂನ್ 24 ರಂದು ಅಭ್ಯಾಸ ಪಂದ್ಯವಾಡಲಿದೆ. ಆದರೆ, ಅಭ್ಯಾಸ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಕೋವಿಡ್-19 ಆತಂಕ ಶುರುವಾಗಿದೆ.
ಲಂಡನ್ ಗೆ ಪ್ರಯಾಣ ಬೆಳಸುವ ಮುನ್ನ ಭಾರತ ತಂಡದ ಆಟಗಾರರನ್ನು ಮುಂಬೈನಲ್ಲಿ ಆರ್‌ಟಿ ಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ವೇಳೆ ಹಿರಿಯ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗಾಗಿ ಪ್ರಯಾಣದಿಂದ ದೂರ ಉಳಿದಿದ್ದರು. ಇದೀಗ ಅವರು ಚೆನ್ನೈನಲ್ಲಿ ಕ್ವಾರಂಟೈನ್‌ನಲ್ಲಿದ್ದು, ಸಂಪೂರ್ಣವಾಗಿ ಗುಣಮುಖರಾದ ಬಳಿಕ ಭಾರತ ತಂಡವನ್ನ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆದರೆ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಕೊರೊನಾ ಸೋಂಕು ತಗುಲಿತ್ತು ಎಂದು ತಿಳಿದು ಬಂದಿದೆ. ಮಾಲ್ಡೀವ್ಸ್‌ನಿಂದ ಲಂಡನ್‌ಗೆ ಆಗಮಿಸಿದ ಬಳಿಕ ವಿರಾಟ್ ಕೊಹ್ಲಿಯ ಕೋವಿಡ್-19 ಟೆಸ್ಟ್ ಪಾಸಿಟಿವ್ ಬಂದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
202 2ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ಮುಗಿಸಿಕೊಂಡಿದ್ದ ವಿರಾಟ್ ಕೊಹ್ಲಿ , ದಕ್ಷಿಣ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳಿದ್ದರು.
ಮಾಲ್ಡೀವ್ಸ್‌ನಲ್ಲಿ ರಜೆ ಮುಗಿಸಿಕೊಂಡು ತಂಡಕ್ಕೆ ಮರಳಿದ ಬಳಿಕ ವಿರಾಟ್ ಕೊಹ್ಲಿಗೂ ಕೂಡ ಕೊರೊನಾ ಸೋಂಕು ತಗುಲಿತ್ತು. ಆದರೆ, ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಹಾಗೂ ತಂಡದ ಜೊತೆಗೆ ಅಭ್ಯಾಸ ನಡೆಸುತ್ತಿದ್ದಾರೆ, ” ಎಂದು ಟೈಮ್ಟ್ ಆಫ್ ಇಂಡಿಯಾ ವರದಿ ಮಾಡಿದೆ.