Virat Kohli – K L Rahul ರೋಹಿತ್ ಇಲ್ಲದಿದ್ದರೇ ಫ್ರೀಯಾಗಿ ಆಡ್ತಾರಾ ಪ್ಲೇಯರ್ಸ್ ?
ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತಂಡದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.
ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಅದ್ಭುತವಾಗಿತ್ತು.
ಬ್ಯಾಟಿಂಗ್, ಬೌಲಿಂಗ್ ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿತ್ತು.
ಬ್ಯಾಟಿಂಗ್ ನಲ್ಲಿ ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ ಆರಂಭಿಕರಾಗಿ ಬಂದು ಅಫ್ಘಾನ್ ಬೌಲರ್ ಗಳ ಬೆಂಡೆತ್ತಿದ್ರು.
ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ಬೊಂಬಾಟ್ ಪ್ರದರ್ಶನ ನೀಡಿದರು.
ಆದ್ರೆ ಈ ಪಂದ್ಯದೊಂದಿಗೆ ಅಭಿಮಾನಿಗಳಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ರು.
ಪಂದ್ಯಕ್ಕೂ ಮುನ್ನ ರಾಹುಲ್ ಜೊತೆ ಸೂರ್ಯ ಕುಮಾರ್ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಆದ್ರೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿ ಸೆಂಚೂರಿ ಸಿಡಿಸಿದ್ರು.
ಇತ್ತ ಕ್ಯಾಪ್ಟನ್ಸಿ ಒತ್ತಡದಲ್ಲಿ ಕೆ.ಎಲ್.ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿದರು.

ರೋಹಿತ್ ಶರ್ಮಾ ಗೈರಿನಲ್ಲಿ ವಿರಾಟ್ ಬ್ಯಾಟ್ ಝಳಪಿಸಿದರು.
ಇದರೊಂದಿಗೆ ಒಂದು ಅನುಮಾನ ಈಗ ಹುಟ್ಟಿಕೊಂಡಿದೆ.
ಅದು ಏನಂದರೇ ರೋಹಿತ್ ಶರ್ಮಾ ತಂಡದಲ್ಲಿ ಇಲ್ಲದಿದ್ದರೇ ಆಟಗಾರರು ಫ್ರೀಯಾಗಿ ಆಡುತ್ತಾರೆ ಎನ್ನುವುದು ಅಭಿಮಾನಿಗಳ ಗುಸು ಗುಸು ಆಗಿದೆ.
ಯಾಕಂದರೇ ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಬಳಿಕ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ.
ಮೈದಾನಲ್ಲಿ ಆಟಗಾರರ ಮೇಲೆ ಫೈರ್ ಆಗುತ್ತಿದ್ದಾರೆ. ಇದು ಆಟಗಾರರ ಉಸಿರುಗಟ್ಟಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಇಲ್ಲದೇ ಇದ್ದಿದ್ದಕ್ಕೆ ಆಟಗಾರರು ಫ್ರೀಯಾಗಿ ನೈಜ ಕ್ರಿಕೆಟ್ ಆಡಿದ್ದಾರೆ ಎಂದು ಚರ್ಚೆ ಶುರುವಾಗಿದೆ.