ಅವರಿಗೇನು ಗೊತ್ತು.. ಕೊಹ್ಲಿ ಗತ್ತು : ವಿರಾಟ್ ಪರ ಆಜಾದ್ ಬ್ಯಾಟ್ Virat kohli saaksha tv
ವಿರಾಟ್ ಕೊಹ್ಲಿ ಅವರನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಕೀರ್ತಿ ಆಜಾದ್ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ಬೆಂಬಲ ಸೂಚಿಸಿರುವ ಆಜಾದ್, ಬಿಸಿಸಿಐ ಹಾಗೂ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ವಿರಾಟ್ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ವ್ಯವಹಾರಿಸಿದ ರೀತಿ ತಪ್ಪಾಗಿ ಕಾಣಿಸುತ್ತಿದೆ. ಏಕದಿನ ನಾಯಕತ್ವದಿಂದ ವಜಾಮಾಡುತ್ತಿರುವುದಾಗಿ ಹೇಳುವುದು ಸರಿಯಾಗಿರಬಹುದು. ಆದ್ರೆ ಹೇಳಿದ ರೀತಿ ಸರಿಯಲ್ಲ. ವಿರಾಟ್ ಕೊಹ್ಲಿ ನಾಯಕನಾಗಿ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಈಗಾಗಲೇ ಸಾಕಷ್ಟು ಇಂಟರ್ ನ್ಯಾಷನಲ್ ಮ್ಯಾಚ್ ಗಳನ್ನಾಡಿ ಒಬ್ಬ ಸಿನಿಯರ್ ಆಟಗಾರನಾಗಿ ತಂಡದಲ್ಲಿದ್ದಾರೆ. ಇಷ್ಟು ಅನುಭವಸ್ಥ ಆಟಗಾರನಿಗೆ ಆಯ್ಕೆ ಸಮಿತಿ ಕನಿಷ್ಠ ಗೌರವ ನೀಡಬೇಕು. ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮೊದಲೇ ವಿರಾಟ್ ಗೆ ಹೇಳಿದ್ದರೇ ಚೆನ್ನಾಗಿ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಇ ರುವ ಸೆಲೆಕ್ಟರ್ಸ್ ದೊಡ್ಡವರಾಗಿರಬಹುದು. ಆದ್ರೆ ಕೊಹ್ಲಿ ಆಡಿರುವ ಮ್ಯಾಚ್ ಗಳಲ್ಲಿ ಅರ್ಧದಷ್ಟು ಕೂಡ ಅವರು ಆಡಿಲ್ಲ. ಹೀಗಿದ್ದಾಗ ಆತನ್ನ ಅವಮಾನಿಸುವ ಹಕ್ಕು ಅವರಿಗಿಲ್ಲ. ನಾನು ನ್ಯಾಷನಲ್ ಸೆಲೆಕ್ಟರ್ ಆಗಿ ಇದ್ದ ಸಂದರ್ಭದಲ್ಲಿ ತಂಡವನ್ನು ಸೆಲೆಕ್ಟ್ ಮಾಡಿ ಅಧ್ಯಕ್ಷರ ಗಮನಕ್ಕೆ ತರುತ್ತಿದ್ದೇವು. ಅವರು ಒಂದು ಬಾರಿ ಪರಿಶೀಲಿಸಿ ಓಕೆ ಅಂದ್ರೆ ತಂಡವನ್ನು ಪ್ರಕಟಿಸುತ್ತಿದ್ದೇವು. ಇದು ರೂಲ್. ಆದ್ರೆ ಅದನ್ನ ಈಗ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.