ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ – ವಿಡಿಯೋ ವೈರಲ್
ವಿರಾಟ್ ಕೊಹ್ಲಿ ವಿಶ್ವದ ಫಿಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರು. ಭಾರತದ ಮಾಜಿ ನಾಯಕ ತನ್ನ ಫಿಟ್‌ನೆಸ್‌ಗೆ ಹೆಚ್ಚಿನ ಒತ್ತು ನೀಡುತ್ತಾರೆ ಮತ್ತು ಅದರ ಬಗ್ಗೆ ಹೆಮ್ಮೆಯೂ ಪಡುತ್ತಾರೆ. ಸೋಮವಾರ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ, ಕೊಹ್ಲಿ ಅಭಿಮಾನಿಗಳಿಗೆ ತಮ್ಮ ಫಿಟ್ನೆಸ್ ನ ಜಲಕ್ ತೊರಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಪ್ಯಾಟ್ ಕಮ್ಮಿನ್ಸ್ ಅವರನ್ನ ಔಟ್ ಮಾಡುವ ವೇಳೆ ವಿರಾಟ್ ಕೊಹ್ಲಿ ಪ್ರೇಕ್ಷಕರ ಸೀಟಿನ ತುದಿಗೆ ಕರೆತಂದಿದ್ದರು.
ಶಮಿ ಎಸೆದ ಲೋಯರ್ ಫುಲ್-ಟಾಸ್ ಬೌಲ್ ನ್ನ ಕಮ್ಮಿನ್ಸ್ ಶಕ್ತಿಯುತವಾಗಿ ಮೇಲೆ ಹೊಡೆದರು, ಬೌಲ್ ಹಗ್ಗ ದಾಟಿ ಸಿಕ್ಸರ್ ಸಿಡಿಯುವಷ್ಟರಲ್ಲಿ ಕೋಹ್ಲಿ ಲಾಂಗ್ ಆನ್ ಅಲ್ಲಿ ಸಂಪೂರ್ಣವಾಗಿ ಜಿಗಿದು ಒಮದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ ಹಿಡಿದುಕೊಂಡರು. ಇದು ಪ್ರೇಕ್ಷರನ್ನ ಸೀಟಿ ತುದಿಗೆ ಕರೆತಂದಿತ್ತು.
VIRAT KOHLI STOP IT!! Takes catch of the tournament.. in a warm up 😂🔥 #T20WorldCup pic.twitter.com/KosXyZw8lm
— Liam Clarke (@Clarkeyy23) October 17, 2022
ಇನ್ನು ಪಂದ್ಯದ ಕುರಿತು ಮಾತನಾಡುವುದಾದರೇ ಸೋಮವಾರ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 186/7 ರ್ನ ಕಲೆಹಾಕಿತ್ತು. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಅರ್ಧ ಶತಕಗಳನ್ನು ಬಾರಿಸಿದರು. ಸೋಮವಾರ ನಡೆದ T20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಆರು ರನ್‌ಗಳ ಜಯ ಸಾಧಿಸಿತು.
Virat kohli: Kohli caught an amazing catch with one hand – video viral