Virat kohli – ಫೇಕ್ ಫೀಲ್ಡಿಂಗ್ ಮಾಡಿದ್ರಾ ವಿರಾಟ್ ಕೊಹ್ಲಿ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಬಾಂಗ್ಲಾ ತಂಡದ ಬ್ಯಾಟರ್ ನೂರುಲ್ ಹಸನ್ ಫೇಕ್ ಫೀಲ್ಡಿಂಗ್ ಆರೋಪ ಮಾಡಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಭಾರತ ರೋಚಕ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ ನಿಗದಿತ 20 ಓವರ್ ಗಳಲ್ಲಿ 184 ರನ್ ಗಳಿಸಿತು.
ಈ ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಉತ್ತಮ ಆರಂಭ ನೀಡಿದರು.
ಆದ್ರೆ ಏಕಾಏಕಿ ಮಳೆ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ ತಂಡಕ್ಕೆ ಪಂದ್ಯ ಗೆಲ್ಲಲು 16 ಓವರ್ಗಳಲ್ಲಿ 151 ರನ್ ಗುರಿ ನೀಡಲಾಯಿತು.
ನಂತರ ಪಂದ್ಯ ಆರಂಭವಾದ್ರೂ ಮೈದಾನ ಒದ್ದೆಯಾಗಿತ್ತು. ಈ ನಡುವೆ ಬಾಂಗ್ಲಾ ಇನ್ನಿಂಗ್ಸ್ ನ ಏಳನೇ ಓವರ್ ನಲ್ಲಿ ಅಕ್ಷರ್ ಪಟೇಲ್ ಎಸೆತವನ್ನು ಲಿಟನ್ ದಾಸ್ ಡೀಪ್ ಆಫ್ ಕಡೆಗೆ ಆಡಿದರು.
ಈ ವೇಳೆ ತನ್ನತ್ತ ಬಂದ ಬಾಲನ್ನು ಹಿಡಿದು ವಿಕೆಟ್ ಕೀಪರ್ ಕಡೆಗೆ ಅರ್ಷ್ ದೀಪ್ ಸಿಂಗ್ ಎಸೆದರು.
![Virat kohli made fake fielding](http://saakshatv.com/wp-content/uploads/2022/11/dinesh-karthik.jpg)
ಆದರೆ ಚೆಂಡು ಕೀಪರ್ ಕೈಗೆ ಸೇರುವ ಮೊದಲು ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಾಯಿಂಟ್ ದಿಕ್ಕಿನಿಂದ ಹಾದು ಹೋಯಿತು.
ಆಗ ಕೊಹ್ಲಿ ಚೆಂಡನ್ನು ಹಿಡಿದು ಎಸೆದವರಂತೆ ಆ್ಯಕ್ಷನ್ ಮಾಡಿದರು.
ಕೊಹ್ಲಿಯ ಈ ಕೃತ್ಯವನ್ನು ಫೀಲ್ಡ್ ಅಂಪೈರ್ಗಳು ಸರಿಯಾಗಿ ಗಮನಿಸಿದ್ದರೆ, ನಿಯಮಗಳ ಪ್ರಕಾರ ಕೊಹ್ಲಿ ಮಾಡಿದ್ದು ಕಾನೂನು ಬಾಹೀರವಾಗಿದ್ದರಿಂದ ಇದಕ್ಕೆ ದಂಡವಾಗಿ ಎದುರಾಳಿ ತಂಡಕ್ಕೆ 5 ರನ್ಗಳನ್ನು ನೀಡುತ್ತಿದ್ದರು. ಆದರೆ ಈ ಘಟನೆ ಅಂಪೈರ್ಗಳ ಗಮನಕ್ಕೆ ಬರಲಿಲ್ಲ.
ಈ ಘಟನೆಯಲ್ಲಿ ಉಲ್ಲೇಖಿಸಿ ನೂರುಲ್ “ಇದನ್ನ ಆನ್ ಫೀಲ್ಡ್ ಅಂಪೈರ್ ಗಳು ಸರಿಯಾಗಿ ಗಮನಿಸಿದ್ದರೇ ನಮಗೆ ನಿರ್ನಾಯಕ ಐದು ರನ್ ಗಳು ಪೆನಾಲ್ಟಿ ರೂಪದಲ್ಲಿ ಸಿಗುತ್ತಿದ್ದವು. ಆಗ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು” ಎಂದಿದ್ದಾರೆ.