ಛೇ..! ವಿರಾಟ್ ಗೆ ಏನಾಗಿದೆ..ರಾಷ್ಟ್ರಗೀತೆಗೆ ಅಗೌರವ..?? virat kohli national anthem
ವಿರಾಟ್ ಕೊಹ್ಲಿ..! ( virat kohli ) ವಿಶ್ವಕಪ್ ಕ್ರಿಕೆಟ್ ನ ಸೂಪರ್ ಸ್ಟಾರ್. ಭಾರತಕ್ಕಾಗಿ ವಿರಾಟ್ ಕೊಹ್ಲಿ ಸಾಕಷ್ಟು ಪಂದ್ಯಗಳನ್ನ ಒಂಟಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ನಾಯಕರಾಗಿ ದೇಶ ವಿದೇಶಗಳಲ್ಲಿ ಭಾರತದ ತಿರಂಗಾ ರಾರಾಜಿಸುವಂತೆ ಮಾಡಿದ್ದಾರೆ. ಆದ್ರೆ ಇದೀಗ ವಿರಾಟ್ ಕೊಹ್ಲಿ ವಿರುದ್ಧ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಭಾರತದಲ್ಲಿ ರಾಷ್ಟ್ರಗೀತೆಗೆ ಪ್ರತ್ಯೇಕ ಸ್ಥಾನ ಕೊಡಲಾಗಿದೆ. ಭಾರತೀಯರು ರಾಷ್ಟ್ರಗೀತೆ ಹಾಡುವಾಗ ಶಿಸ್ತಿನಿಂದ ನಿಂತು ಗೌರವ ತೋರಿಸುತ್ತಾರೆ. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ವಿರಾಟ್ ಕೊಹ್ಲಿ ಅಗೌರವ ತೋರಿದ್ದಾರೆ ಎಂದು ಆರೋಪ ಕೇಳಿಬಂದಿದೆ. virat kohli national anthem
ಈ ವಿಚಾರವಾಗಿ ವಿರಾಟ್ ಕೊಹ್ಲಿ ವಿರುದ್ಧ ಭಾರತೀಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. ಆನ್ ಫೀಲ್ಡ್ ನಲ್ಲಿ ತಮ್ಮ ವರ್ತನೆ ಹೇಗೆ ಇದ್ದರೂ, ದೇಶದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ವಿರಾಟ್, ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯ ಸಮಯದಲ್ಲಿ ವಿರಾಟ್ ಕೊಹ್ಲಿ ಚೂಯಿಂಗ್ ಗಮ್ ಜಗಿಯುತ್ತಾ ಏನೋ ಯೋಚನೆ ಮಾಡುತ್ತಿದ್ದಂತೆ ಕಾಣಿಸಿಕೊಂಡರು. ಇದು ಭಾರತೀಯರ ಅಚ್ಚರಿಗೆ ಕಾರಣವಾಗಿದೆ.
ರಾಷ್ಟ್ರಗೀತೆ ವೇಳೆ ವಿರಾಟ್ ವರ್ತನೆಗೆ ಅಭಿಮಾನಿಗಳು ನೊಂದಿದ್ದು, ಕೊಹ್ಲಿ ವಿರುದ್ಧ ಮುಗಿ ಬೀಳುತ್ತಿದ್ದಾರೆ. ರಾಷ್ಟ್ರಗೀತೆಯನ್ನು ಹಾಡುವಾಗ, ಗಮನ ಕೇಂದ್ರೀಕರಿಸಿರಬೇಕು ಎಂದು ಫೈರ್ ಆಗುತ್ತಿದ್ದಾರೆ.

ವಿರಾಟ್ ರಿಂದ ಈ ರೀತಿಯ ವರ್ತನೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಭಾರತ ತಂಡಕ್ಕೆ ಆಡುವುದು ಇಷ್ಟವಿಲ್ಲದಿದ್ದರೇ ವಿದಾಯ ಘೋಷಣೆ ಮಾಡು ಎಂದು ಒತ್ತಾಯಿಸುತ್ತಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ ನಾಯಕತ್ವಕ್ಕೆ ವಿದಾಯ ಹೇಳಿದ ಬಳಿಕ ಕೊಹ್ಲಿ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೈದಾನದಲ್ಲಿ ಸದಾ ಬೆಂಕಿಯಂತೆ ಇದ್ದ ವಿರಾಟ್ ಈಗ ಕೂಲ್ ಆಗಿಬಿಟ್ಟಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಮೊದಲಿನಂತೆ ಚುರುಕಾಗಿಲ್ಲ. ಕೊಹ್ಲಿ ಹೀಗಿರುವುದಕ್ಕೆ ಬಿಸಿಸಿಐ ಕಾರಣ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. virat kohli national anthem
ಟೀಂ ಇಂಡಿಯಾ ವಿರುದ್ಧ ನಮ್ಮ ಗೆಲುವಿಗೆ ಭಾರತದ ಮಾಧ್ಯಮಗಳು ಕಾರಣ : ಅಖ್ತರ್
ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ದೂರ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಪ್ಲಾನ್ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ವಿರಾಟ್ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಗುಸು ಗುಸು ಕೇಳಿಬರುತ್ತಿದೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್ ಗಳಿಂದ ಸೋಲುಂಡಿದೆ. ಆ ಮೂಲಕ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಭಾರತ ಕ್ಲೀನ್ ಸ್ವೀಪ್ ಆಗಿದೆ.








