ಟೀಂ ಇಂಡಿಯಾ ವಿರುದ್ಧ ನಮ್ಮ ಗೆಲುವಿಗೆ ಭಾರತದ ಮಾಧ್ಯಮಗಳು ಕಾರಣ : ಅಖ್ತರ್
2022ರ ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವ ಕಾರಣ ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಮುಖಾಮುಖಿಯಾಗಲಿವೆ.
ಪಂದ್ಯಕ್ಕೆ ಸುಮಾರು ಒಂಬತ್ತು ತಿಂಗಳು ಬಾಕಿಯಿದ್ದರೂ ಪಾಕ್ ಆಟಗಾರರು ಸೋಶಿಯಲ್ ಮೀಡಿಯಾ ಮೂಲಕ ಕತ್ತಿ ಮಸಿಯುತ್ತಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ಮೊಹ್ಮದ್ ಹಫೀಜ್, ಈ ಬಾರಿಯೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಗೆಲುವು ನಮ್ಮದೇ ಎಂದಿದ್ದಾರೆ.
‘ಈ ಬಾರಿಯೂ ಗೆಲುವು ನಮ್ಮದೇ. ಟಿ20 ವಿಶ್ವಕಪ್‌ನ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾದ ಮೇಲೆ ಪಾಕಿಸ್ತಾನ ಮತ್ತೊಮ್ಮೆ ಮೇಲುಗೈ ಸಾಧಿಸಲಿದೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಯಾವಾಗಲೂ ಭಾರತಕ್ಕಿಂತ ಉತ್ತಮವಾಗಿ ಕಾಣುತ್ತದೆ. ಎರಡು ತಂಡಗಳ ನಡುವೆ ಪಂದ್ಯ ನಡೆದಾಗಲೆಲ್ಲ.. ಭಾರತೀಯ ಮಾಧ್ಯಮಗಳು ಟೀಂ ಇಂಡಿಯಾದ ಮೇಲೆ ಅನಗತ್ಯ ಒತ್ತಡ ಹೇರುವ ಕೆಲಸ ಮಾಡುತ್ತಿವೆ. ಇದು ನಮಗೆ ಧನಾತ್ಮಕವಾಗಿರುತ್ತದೆ. ಆದ್ದರಿಂದ ಟೀಮ್ ಇಂಡಿಯಾ ಸೋಲುತ್ತದೆ ಎಂದು ಅಖ್ತರ್ ಹೇಳಿದ್ದಾರೆ.
ಅಖ್ತರ್ ಅವರ ಈ ಕಾಮೆಂಟ್‌ಗೆ ಟೀಂ ಇಂಡಿಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿ ಟೀಂ ಇಂಡಿಯಾ ಮೇಲುಗೈ ಸಾಧಿಸಲಿದೆ… ಪಂದ್ಯಕ್ಕೆ ಇನ್ನೂ ಒಂಬತ್ತು ತಿಂಗಳು ಬಾಕಿ ಇದೆ ಎಂದಿದ್ದಾರೆ.
ಇನ್ನು T20 ವಿಶ್ವಕಪ್-2022 ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. ಮೊದಲ ಸೆಮಿಫೈನಲ್ ನವೆಂಬರ್ 9 ರಂದು ಮತ್ತು ಎರಡನೇ ಸೆಮಿಫೈನಲ್ ನವೆಂಬರ್ 10 ರಂದು ನಡೆಯಲಿದೆ. ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ಫೈನಲ್ ನಡೆಯಲಿದೆ.