Virat Kohli | ವಿರಾಟ್ ಕೋಟಿಗೊಬ್ಬ ಅಲ್ಲ.. ಯುಗಕ್ಕೊಬ್ಬ..!!
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯದ ಟಾಕ್ ಆಫ್ ದಿ ಟೌನ್..!! ವಿರಾಟ್ ಫಾರ್ಮ್ ನಲ್ಲಿ ಇರಲಿ, ಇಲ್ಲದಿರಲಿ. ಬ್ಯಾಟ್ ಝಳಪಿಸಲಿ, ಝಳಪಿಸದಿರಲಿ, ಎಲ್ಲರ ಬಾಯಲ್ಲೂ ವಿರಾಟ್ ನಾಮಸ್ಮರಣೆ ಇದ್ದೆ ಇರುತ್ತದೆ.
ವಿರಾಟ್ ಕೊಹ್ಲಿ ಬ್ಯಾಡ್ ಫಾರ್ಮ್ ನಲ್ಲಿದ್ದಾಗಲೇ ಅವರ ಹೆಸರು ವಿಶ್ವಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿತ್ತು. ಇದೀಗ ಅವರು ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ ನಲ್ಲಿ ವಿಂಟೇಜ್ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅಫ್ಘಾನ್ ವಿರುದ್ಧ ಬಂತ 71ನೇ ಇಂಟರ್ ನ್ಯಾಷನಲ್ ಸೆಂಚೂರಿ ವಿರಾಟ್ ಮೇಲಿನ ನಿರೀಕ್ಷೆಗಳನ್ನ ಮತ್ತಷ್ಟು ಹೆಚ್ಚಿಸಿವೆ.
ಟಿ 20 ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಅವರನ್ನು ಇಡೀ ವಿಶ್ವ ಕ್ರಿಕೆಟ್ ದಿಗ್ಗಜರೇ ಕೊಂಡಾಡುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ವಿರಾಟ್ ಕೊಹ್ಲಿ ಅವರನ್ನು ಯುಗಕ್ಕೆ ಒಬ್ಬರು ಎಂದು ಹಾಡಿ ಹೋಗಳಿದ್ದಾರೆ.
ಅಲ್ಲದೆ ವಿರಾಟ್ ಕೊಹ್ಲಿ ಅವರನ್ನು ಮೀರಿಸುವವರ ಈ ಭೂಮಂಡಲದಲ್ಲಿಯೇ ಇಲ್ಲ. ಕೊಹ್ಲಿಯಂತಹ ಆಟಗಾರ ಯುಗಕ್ಕೆ ಒಬ್ಬರು ಹುಟ್ಟುತ್ತಾರೆ ಎಂದು ಕೊಂಡಾಡಿದ್ದಾರೆ. ಅಲ್ಲದೆ ತುಂಬಾ ಜನರಂತೆ ನಾನು ಕೂಡ ವಿರಾಟ್ ಕೊಹ್ಲಿ ವೀರಾಭಿಮಾನಿ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ರನ್ ಮಿಷಿನ್ ಅಂತ ಕರೆಸಿಕೊಂಡ ಕಾರಣ ಅವರು ಎಲ್ಲಾ ಪಂದ್ಯಗಳಲ್ಲೂ ಶತಕ ಬಾರಿಸಬೇಕು ಎನ್ನುವುದು ಅತಿಯಾಸೆ ಆಗುತ್ತದೆ. ಇದು ಅವರ ಮೇಲೆ ಅತಿಯಾದ ಒತ್ತಡವನ್ನು ಹೇರಿದಂತೆ ಆಗುತ್ತದೆ. ಈ ಒತ್ತಡವೇ ವಿರಾಟ್ ಕೊಹ್ಲಿ 1020 ದಿನ ಸೆಂಚೂರಿ ಸಿಡಿಸದಿರಲು ಕಾರಣ ಎಂದಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಅವರ ಪಾಡಿಗೆ ಅವರನ್ನ ಬಿಟ್ಟುಬಿಡಬೇಕು. ಆಗ ಒಳ್ಳೆಯ ಫಲಿತಾಂಶ ಬರುತ್ತದೆ. ಕ್ರಿಕೆಟ್ ನಲ್ಲಿ ಕೊಹ್ಲಿ ಕೊಹಿನೂರ್ ವಜ್ರದಂತೆ. ಆತನೊಬ್ಬ ಆಲ್ ಟೈಂಗ್ರೇಟ್ ಕ್ರಿಕೆಟರ್ ಎಂದಿದ್ದಾರೆ ಬ್ರೆಟ್ ಲೀ.