Virat Kohli : ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳ ಅಭಿಮಾನ..!!
ಕಿಸ್ತಾನ : ಟೀಮ್ ಇಂಡಿಯಾ ಮಾಜಿ ನಾಯಕ , ರನ್ ಮಷಿನ್ ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಸಂಖ್ಯೆ ಏನೂ ಕಡಿಮೆಯಿಲ್ಲ.. ಕೇವಲ ಭಾರತ ಅಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಗಳಲ್ಲೂ ಕೊಹ್ಲಿ ಫ್ಯಾನ್ಸ್ ಇದ್ದಾರೆ.. ಅಷ್ಟೇ ಯಾಕೆ ಪಾಕಿಸ್ತಾನದಲ್ಲೂ ಕೊಹ್ಲಿ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕೆ ಪಾಕಿಸ್ತಾನದ ಈ ಅಭಿಮಾನಿಗಳೇ ಸಾಕ್ಷಿ…
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಮುಲ್ತಾನ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಇಬ್ಬರು ಕೊಹ್ಲಿ ಅಭಿಮಾನಿಗಳು ಹಿಡಿದಿದ್ದ ಪೋಸ್ಟರ್ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ..
ಪೋಸ್ಟರ್ ನಲ್ಲಿ, ಹಾಯ್ ಕಿಂಗ್ ಕೊಹ್ಲಿ ನಮ್ಮಲ್ಲಿಗೆ ಬಂದು ಏಷ್ಯಾಕಪ್ ಆಡಿ. ನಾವು ನಮ್ಮ ಕಿಂಗ್ ಬಾಬರ್ ಅಜಮ್ ಗಿಂತ ನಿಮ್ಮನ್ನ ಹೆಚ್ಚು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿರುವ ಪೋಸ್ಟರ್ ಇದಾಗಿದೆ..
ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಹ್ಲಿಯ ಅಭಿಮಾನಿಗಳು ಖುಷ್ ಆಗಿದ್ದಾರೆ..
#ViratKohli𓃵 phenomenal fan base in Pakistan, pak fans loves kohli batting 👍👏 pic.twitter.com/JezFO3YLtz
— RK Reddy 🇮🇳 (@Rams_krrish) December 12, 2022