ಮಿಸ್ ಯೂ ಧೋನಿ ಅಂದಾಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು ?
ಸಡನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದರು. ಧೋನಿ ನಿವೃತ್ತಿಯನ್ನು ಅವರ ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳುತ್ತಿಲ್ಲ.
ಯಾಕಂದ್ರೆ ಕ್ರಿಕೆಟ್ ಮೈದಾನದಲ್ಲಿ ಮತ್ತು ಮೈದಾನದ ಹೊರಗಡೆ ಧೋನಿಯ ಮಹಿಮೆಯೇ ಅಂತಹುದ್ದು. ಒಬ್ಬ ಆಟಗಾರನಾಗಿ, ಒಬ್ಬ ಕ್ರಿಕೆಟಿಗನಾಗಿ, ವಿಕೆಟ್ ಕೀಪರ್ ಆಗಿ, ನಾಯಕನಾಗಿ, ಮಾಜಿ ನಾಯಕನಾಗಿ ಧೋನಿ ಮಾಡಿರುವಂತಹ ಸಾಧನೆ ಅಂತಹುದ್ದು.
ಅದೇ ರೀತಿ ಮೈದಾನದ ಹೊರಗಡೆ ಕೂಡ. ಒಬ್ಬ ವ್ಯಕ್ತಿಯಾಗಿ, ಒಬ್ಬ ನಾಗರೀಕನಾಗಿ, ದೇಶ ಪ್ರೇಮಿಯಾಗಿ, ರೈತನಾಗಿ ಧೋನಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು, ಕ್ರಿಕೆಟ್ ಬಿಟ್ಟು ಧೋನಿ ಜಾಹಿರಾತುಗಳಲ್ಲಿ, ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.
ಹಾಗೇ, ದೇಶದ ವಿಚಾರವಾಗಿ ಬಂದಾಗಲೂ ಧೋನಿ ಒಂದು ಹೆಜ್ಜೆ ಮುಂದಿರುತ್ತಾರೆ. ಬಿಡುವು ಸಿಕ್ಕಾಗ ಸೈನಿಕರ ಜೊತೆ ಕಾಲ ಕಳೆಯುವ ಧೋನಿ ಅಪ್ಪಟ ದೇಶ ಪ್ರೇಮಿಯಾಗಿ ಕಾಣುತ್ತಾರೆ.
ಇದೀಗ ಕ್ರಿಕೆಟ್ ನಿವೃತ್ತಿಯ ನಂತರ ರಾಂಚಿಯಲ್ಲಿರುವ ತನ್ನದೇ ಫಾರ್ಮ್ ನಲ್ಲಿ ಕೃಷಿ ಕಾರ್ಯದಲ್ಲೂ ಬಿಝಿಯಾಗಿದ್ದಾರೆ.
ಸದ್ಯ ಧೋನಿಗೆ ಐಪಿಎಲ್ ನಂತರ ಧೋನಿಗೆ ತನ್ನ ಕುಟುಂಬ, ಕೃಷಿ, ಸೈನ್ಯ ಹೀಗೆ ಜೀವನವನ್ನು ಸಾಗಿಸುತ್ತಿದ್ದಾರೆ.
ಆದ್ರೆ ಮೈದಾನದಲ್ಲಿ ಧೋನಿಯ ಹವಾ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಟೀಮ್ ಇಂಡಿಯಾ ಆಟಗಾರರಿಗೆ ಧೋನಿ ಅಲಭ್ಯತೆ ಕಾಡುತ್ತಿದೆ. ಅದೇ ರೀತಿ ಯುವ ಹಾಗೂ ಎದುರಾಳಿ ತಂಡದ ಆಟಗಾರರಿಗೂ ಧೋನಿಯಂತೆ ಆಡಬೇಕು ಅನ್ನೋ ಸ್ಪೂರ್ತಿ ಇದೆ. ಇದು ಮೈದಾನದಲ್ಲಿ ಆಗಾಗ ಕೇಳಿ ಬರುತ್ತಿದೆ.
ಸದ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭಿಮಾನಿಗಳೂ ಧೋನಿಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪಂದ್ಯದ ವೇಳೆ ವಿ ಮಿಸ್ ಯೂ ಧೋನಿ ಅಂತ ಬ್ಯಾನರ್ ಪ್ರದರ್ಶನ ಮಾಡುತ್ತಿದ್ದರು.
ಇದೇ ವೇಳೆ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೋಡಿದ್ದಾರೆ. ಅಭಿಮಾನಿಗಳ ಬೇಸರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ವಿರಾಟ್, ನೀವು ಮಾತ್ರ ಮಿಸ್ ಮಾಡಿಕೊಳ್ಳುತ್ತಿಲ್ಲ. ನಾವು ಮಿಸ್ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಮೀ ಟೂ ಅಂತ ಕೈ ಸನ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಧೋನಿ ಅಭಿಮಾನಿಗಳ ಜೊತೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಕೂಡ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಧೋನಿ ಅಂದ್ರೆ ಧೋನಿಯೇ… ಯಾಕಂದ್ರೆ ಮಾಹಿಯ ಮಹಿಮೆಯೇ ಅಂತಹುದ್ದು.
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]








