Virat Kohli | ತಂಡವನ್ನು ಗೆಲ್ಲಿಸುವುದೇ ನನ್ನ ಗುರಿ
ಏಷ್ಯಾಕಪ್ 2022 ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕೆರಿಯರ್ ನಲ್ಲಿ ಅಪರೂಪದ ಮೈಲಿಗಲ್ಲನ್ನು ತಲುಪಲಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂರನೇ ಟಿ 20 ಪಂದ್ಯವನ್ನಾಡಿದ ಕ್ರಿಕೆಟರ್ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಅಂದರೆ ವಿರಾಟ್ ಕೊಹ್ಲಿಗೆ ಪಾಕ್ ವಿರುದ್ದದ ಪಂದ್ಯ ನೂರನೇ ಟಿ 20 ಪಂದ್ಯವಾಗಿದೆ.
ಸಾಕಷ್ಟು ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ವಾಪಸ್ ಆಗಿದ್ದು, ಏಷ್ಯಾಕಪ್ ಗಾಗಿ ಸಂಪೂರ್ಣ ಸನ್ನದ್ಧವಾಗಿದ್ದಾರೆ. ನೆಟ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಬೆವರಿಳಿಸುತ್ತಿದ್ದಾರೆ.
ಇದರೊಂದಿಗೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಬರೋದು ಪಕ್ಕಾ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
ಇನ್ನು ವೆಸ್ಟ್ ಇಂಡೀಸ್, ಜಿಂಬಾಬ್ವೆ ಪ್ರವಾಸದಿಂದ ಗೈರಾಗಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ತಂಡವನ್ನು ಎದುರಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ಬಿಸಿಸಿಐ ಟಿವಿಗೆ ಸಂದರ್ಶನವೊಂದನ್ನ ನೀಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ, ತಾವು ಆಡುವ ಪ್ರತಿ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಲು ಶಥಾಯಗತಾಯ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ನಾನು ನಿದ್ದೆಯಿಂದ ಎದ್ದ ಕೂಡ ಆ ದಿನ ಏನು ಮಾಡಬೇಕು ? ಎಂಬುದರ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುವುದಿಲ್ಲ. ಆದ್ರೆ ಮಾಡಬೇಕಾದ ಕೆಲಸವನ್ನು ನೂರಕ್ಕೆ ನೂರಷ್ಟು ಮಾಡುತ್ತೇನೆ.
ಮೈದಾನದಲ್ಲಿ ನೀನು ಅಷ್ಟು ಆಕ್ರಮಣಕಾರಿಯಾಗಿ ಹೇಗೆ ಇರ್ತಿಯಾ ಅಂತ ತುಂಬಾ ಜನ ನನ್ನನ್ನ ಪ್ರಶ್ನಿಸುತ್ತಾರೆ. ಅವರಿಗೆ ನಾನು ಹೇಳೋದು ಒಂದೇ. ನನಗೆ ಆಟ ಅಂದ್ರೆ ಇಷ್ಟ.
ಪ್ರತಿ ಎಸೆತವನ್ನು ಎದುರಿಸಬೇಕು ಎಂದುಕೊಳ್ಳುತ್ತೇನೆ. ತಂಡವನ್ನು ಗೆಲ್ಲಿಸುವುದಕ್ಕಾಗಿ ನಾನು ಎಲ್ಲಾ ಪ್ರಯತ್ನ ಮಾಡುತ್ತೇನೆ.
ಇದು ಅಸಹಜ ಎಂದು ಭಾವಿಸುವುದಿಲ್ಲ. ಏನೇ ಆಗಲಿ ತಂಡವನ್ನು ಗೆಲ್ಲಿಸುವುದೇ ನನ್ನ ಗುರಿ. ದಕ್ಕಾಗಿ ಏನೇ ಕಷ್ಟ ಬಂದರೂ ಸಹಿಸುತ್ತೇನೆ ಎಂದು ಹೇಳಿದ್ದಾರೆ.
ಒಂದು ವೇಳೆ ಮೈದಾನ ವಿಭಿನ್ನವಾಗಿದ್ದರೇ ಅಂದು ನನ್ನ ತಯಾರಿ ಹೇಗಿರುತ್ತದೆ ಎಂಬೋದು ನನಗೆ ಮಾತ್ರ ಗೊತ್ತಿದೆ. ಆದ್ರೆ ಅದು ಕೆಲವರಿಗೆ ಸಹಜ ಅನಿಸದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.








