ಇತಿಹಾಸ ಸೃಷ್ಠಿಸಿದ್ದೇವೆ.. ಶಮಿ ವಿಶ್ವದ ಅತ್ಯುತ್ತಮ ವೇಗಿ virat-kohli saaksha tv
ಮೊಹಮ್ಮದ್ ಶಮಿ ಪ್ರಸ್ತುತ ಸದ್ಯ ವಿಶ್ವದ ಮೂವರು ಅತ್ಯುತ್ತಮ ವೇಗಿಗಳಲ್ಲಿ ಒಬ್ಬರು ಎಂದು ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೊಹ್ಲಿ, ಸೆಂಚುರಿಯನ್ ನಲ್ಲಿ ಇದುವರೆಗೆ ಯಾವುದೇ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿಲ್ಲ.
ನಾವು ಇಂದು ಅದನ್ನು ಮಾಡಿ ಇತಿಹಾಸ ಬರೆದಿದ್ದೇವೆ. ದಕ್ಷಿಣ ಆಫ್ರಿಕಾ ಪ್ರವಾಸವು ನಮಗೆ ಯಾವಾಗಲೂ ಕಷ್ಟಕರವಾಗಿರುತ್ತದೆ. ಇಲ್ಲಿನ ಪಿಚ್ಗಳಲ್ಲಿ ಬ್ಯಾಟಿಂಗ್ ಸವಾಲಿನದ್ದಾಗಿದೆ.
ಮೊದಲ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಇನಿಂಗ್ಸ್ ಆಡಿದ್ದರು. ಗೆಲುವಿನಲ್ಲಿ ಅವರ ಪಾತ್ರ ಅವಿಸ್ಮರಣೀಯ.
ಮತ್ತು ಮುಹಮ್ಮದ್ ಶಮಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ. ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು.
ವಿಶೇಷವಾಗಿ ಶಮಿ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳ ತೆಗೆದಿದ್ದು ಅವರ ಫಾರ್ಮ್ ಅನ್ನು ತೋರಿಸುತ್ತದೆ.
ಈ ಪ್ರದರ್ಶನ ಒಂದು ಸಾಕು ಶಮಿ ಅದ್ಭುತ ಬೌಲರ್ ಎಂದು ಹೇಳಲು. ಸದ್ಯ ವಿಶ್ವದ ಮೂವರು ಅತ್ಯುತ್ತಮ ವೇಗಿಗಳಲ್ಲಿ ಶಮಿ ಕೂಡ ಒಬ್ಬರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಶಮಿಯನ್ನು ವಿರಾಟ್ ಹಾಡಿ ಹೊಗಲಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಟೆಸ್ಟ್ಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.
ಉಳಿದ ಎರಡು ಟೆಸ್ಟ್ಗಳಲ್ಲಿ ಒಂದನ್ನು ಗೆದ್ದರೆ ಸರಣಿ ಕೈವಶವಾಗುತ್ತದೆ. ಈ ಟೆಸ್ಟ್ನಲ್ಲಿ ಟೀಂ ಇಂಡಿಯಾದ ಯಶಸ್ಸಿನಲ್ಲಿ ಇಬ್ಬರೂ ನಿರ್ಣಾಯಕರಾಗಿದ್ದಾರೆ.
ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದರೆ.. ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದ ಶಮಿ.. ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದು.. ಒಟ್ಟು 8 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು.
ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಜನವರಿ 3-7 ರವರೆಗೆ ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ.