ಕಿಂಗ್ ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್ ನ ಕುಬೇರ..!

1 min read

ಕಿಂಗ್ ವಿರಾಟ್ ಕೊಹ್ಲಿ ಈಗ ವಿಶ್ವ ಕ್ರಿಕೆಟ್ ನ ಕುಬೇರ..!

virat kohli rcb ipl 2021ಟೀಮ್ ಇಂಡಿಯಾದ ನಾಯಕ… ಆಧುನಿಕ ವಿಶ್ವ ಕ್ರಿಕೆಟ್ ನ ರನ್ ಮೆಷಿನ್..,ಚೇಸಿಂಗ್ ಗಾಡ್ ಹೀಗೆ ಹಲವು ಬಿರುದುಗಳ ಜೊತೆಗೆ ಕೆಲವೊಂದು ಟೀಕೆಗಳಿಗೂ ಗುರಿಯಾಗಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಸದ್ಯ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಸೋಲಿನ ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಸಿದ್ಧರಾಗುತ್ತಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಮತ್ತೊಂದು ಖುಷಿಯ ಸುದ್ದಿಯಲ್ಲಿದ್ದಾರೆ. ಟೀಮ್ ಇಂಡಿಯಾ ನಾಯಕ ವಿಶ್ವದ ಶ್ರೀಮಂತ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಟೀಮ್ ಇಂಡಿಯಾದ ಆಟಗಾರನಾಗಿ, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಹಾಗೂ ವಿವಿಧ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿ ಮೌಲ್ಯ 60 ಮಿಲಿಯನ್ ಡಾಲರ್.
ಸೂಪರ್ ವಿ ಖ್ಯಾತಿಯ ವಿರಾಟ್ ಕೊಹ್ಲಿ ಅವರಿಗೆ ಇನ್ ಸ್ಟಾ ಗ್ರಾಮ್ ನಲ್ಲಿ 100 ಮೀಲಿಯನ್ ಫಾಲೋವರ್ಸ್ ಇದ್ದಾರೆ. ಇನ್ ಸ್ಟಾ ಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ಸಂಭಾವಣೆ ಪಡೆಯುವ ಕ್ರಿಕೆಟಿಗರ. ಒಂದು ಪೋಸ್ಟ್ ಗೆ 5 ಕೋಟಿ ರೂಪಾಯಿ ವಿರಾಟ್ ಕೊಹ್ಲಿ ಖಾತೆಗೆ ಸೇರಿಕೊಳ್ಳುತ್ತದೆ.
ಇನ್ನು ವಿರಾಟ್ ಕೊಹ್ಲಿ ಎ ಪ್ಲಸ್ ಕೆಟಗರಿಯ ಒಪ್ಪಂದಲ್ಲಿ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ, ಆಟಗಾರನಾಗಿ ಪಡೆಯುತ್ತಿರುವ ಸಂಭಾವಣೆ ಏಳು ಕೋಟಿ ರೂಪಾಯಿ. ಹಾಗೇ ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬೂಮ್ರಾ ಕೂಡ ಕೋಹ್ಲಿಯವರಷ್ಟೇ ಸಂಭಾವಣೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ನ ನಾಯಕ ಜಾಯ್ ರೂಟ್ ಅವರು 8.97 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಹಾಗಿದ್ದ ಮೇಲೆ ವಿರಾಟ್ ಕೊಹ್ಲಿ ಹೇಗೆ ಭಾರತದ ಶ್ರೀಮಂತ ಕ್ರೀಡಾಪಟು ಆಗುತ್ತಾರೆ ಅನ್ನೋದಕ್ಕೆ ಉತ್ತರ ಹೀಗಿದೆ ನೋಡಿ.
virat kohli team india saakshatvಹೌದು, ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದಾರೆ. ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ 2021ರ ಆವೃತ್ತಿಯಲ್ಲಿ 17 ಕೋಟಿ ರೂಪಾಯಿ ಸಂಭಾವಣೆ ಪಡೆಯುತ್ತಿದ್ದಾರೆ.
ಹಾಗೇ ಜಾಹಿರಾತು ಕಂಪೆನಿಗಳ ಕಣ್ಮನಿಯಾಗಿರುವ ವಿರಾಟ್ ಕೊಹ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಪ್ಯೂಮಾ, ಮೈಂತ್ರ, ಉಬೇರ್ ಇಂಡಿಯಾ, ಮಾನ್ಯವರ್, ಎಮ್ ಆರ್ ಎಫ್, ಎಮ್ ಪಿಎಲ್, ಫಿಲಿಫ್ಸ್ ಹೀರೋ, ವಿಕ್ಸ್ ಸೇರಿದಂತೆ ಇನ್ನಿತರ ಜಾಹಿರಾತುಗಳಲ್ಲಿ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಭಾರತದ ಶ್ರೀಮಂತ ಕ್ರೀಡಾಪಟು ಅಲ್ಲದೆ ಸೆಲೆಬ್ರಿಟಿ ಲೀಸ್ಟ್ ನಲ್ಲೂ ಇದ್ದಾರೆ. ಆಟದ ಜೊತೆಗೆ ಜಾಹಿರಾತುಗಳ ಮೂಲಕ ಸಂಪಾದನೆ ಮಾಡುತ್ತಿರುವ ವಿರಾಟ್ ಕೊಹ್ಲಿ ಬೊಕ್ಕಸ ತುಂಬಿ ತುಳುಕುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd