ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಪರ್ವಕ್ಕೆ ಸಜ್ಜಾಗಿದೆ ವಿರಾಟಪರ್ವ..!!!

1 min read

ವಿರಾಟಪರ್ವ ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆಯನ್ನ ಹುಟ್ಟಿಸಿರೋ, ಹೊಸ ಭರಸೆ ಹುಟ್ಟಿಸ್ತಿರೋ ಸಿನಿಮಾ. ಸೆಟ್ಟೇರಿದಾಗಿನಿಂದ್ಲೂ ವಿಶಿಷ್ಠ ವಿಚಾರಗಳಿಂದ್ಲೇ ಸದ್ದು ಸುದ್ದಿ ಮಾಡ್ತಿದೆ. ಮುದ್ದು ಮನಸೇ ಖ್ಯಾತಿಯ ಅನಂತ್ ಶೈನ್ ನಿರ್ದೇಶನದಲ್ಲಿ ಎಸ್. ಆರ್ ಮಿಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸುನೀಲ್ ರಾಜ್ ನಿರ್ಮಾಣಮಾಡ್ತಿರೋ ಸಿನಿಮಾ. ವಿನೀತ್ ರಾಜ್ ಮೆನನ್ ಸಂಗೀತ. ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಈ ಚಿತ್ರದಲ್ಲಿ ಅರುಗೌಡ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗಾಗ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಿದ್ದು, ಎರಡನೇ ಪೋಸ್ಟರ್ ನ ಮೈಸೂರಿನ ಹುತಾತ್ಮ ಯೋಧ ಹೇಮಚಂದರ್ ರ ಪೋಷಕರಿಂದ ಬಿಡುಗಡೆ ಮಾಡಿಸಲಾಯ್ತು. ಚಿತ್ರದಲ್ಲಿ ಯಶ್ ಶೆಟ್ಟಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ತುಂಬಾ ವಿಶೇಷವಾದ ಟ್ರ್ಯಾಕ್ ಅದಾಗಿರಲಿದೆಯಂತೆ. ಹಾಗಾಗಿ ದೇಶಕ್ಕಾಗಿ ಪ್ರಾಣತೆತ್ತ ವೀರ ಕನ್ನಡಿಗ, ಭವ್ಯ ಭಾರತಾಂಬೆಯ ಹೆಮ್ಮೆಯ ಪುತ್ರ ಎನ್ನಿಸಿಕೊಂಡಂತಹ ಮೈಸೂರಿನ ಹುತಾತ್ಮ ಯೋಧ ಹೇಮಚಂದರ್ ಅವ್ರ ಪೋಷಕರಿಂದ ಯಶ್ ಶೆಟ್ಟಿಯ ಸೈನಿಕ ಲುಕ್ನ ಬಿಡುಗಡೆ ಮಾಡಿಸಿ ಎಲ್ಲರೂ ಸೆಲ್ಯೂಟ್ ಹೊಡೆಯುವಂತಹ ಕೆಲಸ ಮಾಡಿದ್ರು. ಈ ಎರಡೂ ವಿಚಾರದಿಂದಾಗಿ ವಿರಾಟಪರ್ವ ಉದ್ಯಮದಲ್ಲಿ, ಹಾಗೇ ಚಿತ್ರ ಪ್ರೇಮಿಗಳಲ್ಲಿ ವಿಶೇಷ ಕುತೂಹಲವನ್ನ ಸೃಷ್ಟಿಸಿತ್ತು. ಈಗಾಗ್ಲೇ ಟಾಕ್ ಕ್ರಿಯೇಟ್ ಮಾಡಿರೋ ವಿರಾಟ ಪರ್ವ ಚಿತ್ರತಂಡ ಇದೀಗ ಮತ್ತೊಂದು ವಿಚಾರವಾಗಿ ಸದ್ದು ಸುದ್ದಿ ಮಾಡ್ತಿದೆ. ಹೌದು, ಮೂರು ವಿಭಿನ್ನ ಕಥೆಗಳ ಸಂಗಮವಾಗಿರಲಿರೋ ವಿರಾಟಪರ್ವದಲ್ಲಿ. ಅರುಗೌಡ, ಯಶ್ ಶೆಟ್ಟಿಯ ಜೊತೆಗೆ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ನಿರ್ದೇಶಕ ಮಂಸೋರೆ ಬಣ್ಣ ಹಚ್ಚುತ್ತಿದ್ದಾರೆ. ವಿರಾಟಪರ್ವ ಚಿತ್ರದ ಪಾತ್ರವನ್ನ ಕೇಳಿ ಇಂಪ್ರೆಸ್ ಆಗಿರೋ ಮಂಸೋರೆ ಸಿನಿಮಾ ಜೀವನ್ನಕ್ಕೆ ಹತ್ತಿರವಾಗಿರೋ ಈ ಪಾತ್ರವನ್ನ ನಿಭಾಯಿಸೋದಕ್ಕೆ ತುಂಬು ಉತ್ಸಾಹದಲ್ಲಿ ಒಪ್ಪಿಕೊಂಡು ನಟಿಸಿದ್ದಾರೆ. ಅಂದ್ಹಾಗೆ ಹಲವು ವಿಶೇಷ ವಿಚಾರಗಳಿಂದ ಸದ್ದು ಸುದ್ದಿಯಾಗ್ತಾ ಬರ್ತಿರೋ ವಿರಾಟ ಪರ್ವ ಸಿನಿಮಾ ಸದ್ಯದಲ್ಲೇ ಟೀಸರ್ ರಿಲೀಸ್ ಮಾಡೋ ಸನ್ನಾಹದಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd