ವೀರೂ ಭಾಯ್ ನನ್ನ ಸಂಬಳವನ್ನು ಜಾಸ್ತಿ ಮಾಡಿ ಎಂದು ಅಮಿತ್ ಮಿಶ್ರಾ ಹೇಳಿದ್ಯಾಕೆ ?

1 min read
Virender Sehwag amith mishra delhi capitals saakshatv

ವೀರೂ ಭಾಯ್ ನನ್ನ ಸಂಬಳವನ್ನು ಜಾಸ್ತಿ ಮಾಡಿ ಎಂದು ಅಮಿತ್ ಮಿಶ್ರಾ ಹೇಳಿದ್ಯಾಕೆ ?

amith mishra delhi capitals ipl 2021 saakshatvಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ವಿಕೆಟ್ ಗಳ ಜಯ ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ.
ನಾಲ್ಕು ಓವರ್ ಗಳಲ್ಲಿ 24 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಉರುಳಿಸಿದ್ದ ಅಮಿತ್ ಮಿಶ್ರಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿದೆ.
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶಾನ್, ಕಿರಾನ್ ಪೊಲಾರ್ಡ್ ಅವರ ವಿಕೆಟ್ ಪಡೆದ ಅಮಿತ್ ಮಿಶ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೀರೋ ಆಗಿಬಿಟ್ಟಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅಮಿತ್ ಮಿಶ್ರಾಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡು ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮಿತ್ ಮಿಶ್ರಾ ಅವರ ಈ ಪ್ರದರ್ಶನವನ್ನು ನೋಡಿದ ಮೇಲೆ ಆಗಿನ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ನಾಯಕನಾಗಿದ್ದ ಹಾಗೂ ಟೀಮ್ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.

Viru bhai please get my salary increased’: Sehwag reveals DC spinner’s request

delhi capitals amith mishra saakshatvಅದು 2008ರ ಚೊಚ್ಚಲ ಐಪಿಎಲ್ ಟೂರ್ನಿ. ಆಗಿನ ಡೆಲ್ಲಿ ಡೇರ್ ಡೇವಿಲ್ಸ್ ತಂಡಕ್ಕೆ ನಾನು ನಾಯಕನಾಗಿದ್ದೆ. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಅಮಿತ್ ಮಿಶ್ರಾ ಅವರು ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು. ಹಾಗೇ ನಾನು ಅಮಿತ್ ಬಳಿ ಕೇಳಿದ್ದೆ. ನಿನಗೆ ಏನು ಬೇಕು ಅಂತ. ಅದಕ್ಕೆ ಅಮಿತ್ ಉತ್ತರ ಹೀಗಿತ್ತು.. ವೀರೂ ಭಾಯ್ ನನ್ನ ಸಂಬಳವನ್ನು ಜಾಸ್ತಿ ಮಾಡಿ ಎಂದು ಅಮಿತ್ ಮಿಶ್ರಾ ಹೇಳಿದ್ದರು. ಈ ವಿಚಾರವನ್ನು ವೀರೇಂದ್ರ ಸೆಹ್ವಾಗ್ ಇದೀಗ ನೆನಪು ಮಾಡಿಕೊಂಡಿದ್ದಾರೆ.
ಅಮಿತ್ ಮಿಶ್ರಾ ವಿಭಿನ್ನ ರೀತಿಯ ವ್ಯಕ್ತಿ. ತುಂಬಾನೇ ಶಾಂತ ಸ್ವಭಾವದರು. ಎಲ್ಲರ ಜೊತೆಗೆ ಚೆನ್ನಾಗಿಯೇ ಬೆರೆಯುತ್ತಾರೆ. ಎಲ್ಲರ ಜೊತೆಗೂ ಚೆನ್ನಾಗಿಯೇ ಮಾತನಾಡುತ್ತಿರುತ್ತಾರೆ. ಅದಕ್ಕಾಗಿಯೇ ಅಮಿತ್ ಮಿಶ್ರಾ ಅವರನ್ನು ಕಂಡ್ರೆ ಎಲ್ಲರಿಗೂ ಒಂಥರಾ ಪ್ರೀತಿ ಎಂದು ವೀರೂ ಅಮಿತ್ ಮಿಶ್ರಾ ಅವರ ವ್ಯಕ್ತಿತ್ವದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಆದ್ರೆ ಈಗ ಹ್ಯಾಟ್ರಿಕ್ ವಿಕೆಟ್ ಪಡೆದ್ರೆ ಅಮಿತ್ ಮಿಶ್ರಾ ಸಂಬಳ ಜಾಸ್ತಿ ಮಾಡಿ ಅಂತ ಕೇಳುವುದಿಲ್ಲ. ಯಾಕಂದ್ರೆ ಅವರು ಅಷ್ಟು ಹಣವನ್ನು ಈಗ ಪಡೆಯುತ್ತಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd