ಕೆಲ ದಿನಗಳಿಂದ ತಮಿಳಿನ ಖ್ಯಾತ ನಟ ವಿಶಾಲ್ ಅವರಿಗೆ ಕೊರೊನಾ ಪಾಸಿಟಿವ್ ಇರುವ ಸುದ್ದಿ ಭಾರೀ ಚರ್ಚೆಯಲ್ಲಿತ್ತು. ಇದೀಗ ಈ ಗಾಳಿಸುದ್ದಿಗೆ ತೆರೆ ಎಳೆದಿರುವ ವಿಶಾಲ್ ನನಗೆ ಹಾಗೂ ನನ್ನ ತಂದೆಗೆ ಕೊರೊನಾ ಪಾಸಿಟಿವ್ ಇದ್ದದ್ದು ನಿಜ. ಆದ್ರೆ ಈಗ ನಾವು ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ಒಂದು ವಾರದ ಹಿಂದೆಯೇ ವಿಶಾಲ್, ಅವರ ತಂದೆ ಹಾಗೂ ಮ್ಯಾನೇಜರ್ ಗೂ ಸೋಂಕು ಧೃಡಪಟ್ಟಿತ್ತು. ಆದ್ರೆ ಅವರು ಆಸ್ಪತ್ರೆಗೆ ಹೋಗದೇ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿತಿ ಮಾಹಿತಿ ಹಂಚಿಕೊಂಡಿರುವ ವಿಶಾಲ್ ನನಗೆ , ನಮ್ಮ ತಂದೆಗೆ ಹಾಗೂ ನಮ್ಮ ಮ್ಯಾನೇಜರ್ ಗೆ ಪಾಸಿಟಿವ್ ಬಂದಿತ್ತು. ಆದರೇ ನಾವೆಲ್ಲರೂ ಮನೆಯಲ್ಲಿಯೇ ಆಯುರ್ವೇದ ಔಷಧಗಳನ್ನು ತೆಗೆದುಕೊಂಡು ಕೇವಲ ಒಂದೇ ವಾರದಲ್ಲಿ ಗುಣಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಮುಂಜಾಗ್ರತಾ ಕ್ರಮವಾಗಿ ವಿಶಾಲ್, ಅವರ ತಂದೆ ಹಾಗೂ ಮ್ಯಾನೇಜರ್ ಪ್ರಸ್ತುತ ಕ್ವಾರೆಂಟೈನಲ್ಲಿದ್ದಾರೆ.
Post Office Schemes: ಗ್ರಾಮ ಸುರಕ್ಷಾ ಯೋಜನೆ-35 ಲಕ್ಷ ಲಾಭ!
ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ನೀಡುವ ಒಂದು ಆಕರ್ಷಕ ಯೋಜನೆಯಾಗಿದೆ. ದಿನಕ್ಕೆ ಕೇವಲ 50 ರೂಪಾಯಿ ಹೂಡಿಕೆ ಮಾಡುವ ಮೂಲಕ 60 ವರ್ಷದ...