ಕೆಲ ದಿನಗಳಿಂದ ತಮಿಳಿನ ಖ್ಯಾತ ನಟ ವಿಶಾಲ್ ಅವರಿಗೆ ಕೊರೊನಾ ಪಾಸಿಟಿವ್ ಇರುವ ಸುದ್ದಿ ಭಾರೀ ಚರ್ಚೆಯಲ್ಲಿತ್ತು. ಇದೀಗ ಈ ಗಾಳಿಸುದ್ದಿಗೆ ತೆರೆ ಎಳೆದಿರುವ ವಿಶಾಲ್ ನನಗೆ ಹಾಗೂ ನನ್ನ ತಂದೆಗೆ ಕೊರೊನಾ ಪಾಸಿಟಿವ್ ಇದ್ದದ್ದು ನಿಜ. ಆದ್ರೆ ಈಗ ನಾವು ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. ಒಂದು ವಾರದ ಹಿಂದೆಯೇ ವಿಶಾಲ್, ಅವರ ತಂದೆ ಹಾಗೂ ಮ್ಯಾನೇಜರ್ ಗೂ ಸೋಂಕು ಧೃಡಪಟ್ಟಿತ್ತು. ಆದ್ರೆ ಅವರು ಆಸ್ಪತ್ರೆಗೆ ಹೋಗದೇ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿತಿ ಮಾಹಿತಿ ಹಂಚಿಕೊಂಡಿರುವ ವಿಶಾಲ್ ನನಗೆ , ನಮ್ಮ ತಂದೆಗೆ ಹಾಗೂ ನಮ್ಮ ಮ್ಯಾನೇಜರ್ ಗೆ ಪಾಸಿಟಿವ್ ಬಂದಿತ್ತು. ಆದರೇ ನಾವೆಲ್ಲರೂ ಮನೆಯಲ್ಲಿಯೇ ಆಯುರ್ವೇದ ಔಷಧಗಳನ್ನು ತೆಗೆದುಕೊಂಡು ಕೇವಲ ಒಂದೇ ವಾರದಲ್ಲಿ ಗುಣಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಮುಂಜಾಗ್ರತಾ ಕ್ರಮವಾಗಿ ವಿಶಾಲ್, ಅವರ ತಂದೆ ಹಾಗೂ ಮ್ಯಾನೇಜರ್ ಪ್ರಸ್ತುತ ಕ್ವಾರೆಂಟೈನಲ್ಲಿದ್ದಾರೆ.
ಮಾಧ್ಯಮ ಸ್ನೇಹಿತರಿಗಾಗಿ ವಿನೂತನ ಕ್ರಿಕೆಟ್ ಟೂರ್ನಿ: ಮತ್ತೊಂದು ವಿಭಿನ್ನ ಪ್ರಯತ್ನ, ಪ್ರಯೋಗಕ್ಕೆ ಮುನ್ನಡಿ ಬರೆದ 9 ಡ್ರೀಮ್ಸ್ ಸಂಸ್ಥೆ
ಬೆಂಗಳೂರು: ಕನ್ನಡ ಮಾಧ್ಯಮ ರಂಗದಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ನೇಹಿತರನ್ನು ಒಂದೇ ವೇದಿಕೆಯಲ್ಲಿ ಒಂದುಗೂಡಿಸುವ ವಿನೂತನ ಕ್ರಿಕೆಟ್ ಟೂರ್ನಿಗೆ 9 ಡ್ರೀಮ್ಸ್ ಸಂಸ್ಥೆ...








