vishnu solankis | ಮಗಳ ಸಾವಿನ ಬೆನ್ನಲ್ಲೆ ತಂದೆ ಕೊನೆಯುಸಿರು.. ಸೋಲಂಕಿ ಬಾಳಲ್ಲಿ ಕ್ರೂರಿ ವಿಧಿಯಾಟ
ಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿ ಅವರ ಬಾಳಿನಲ್ಲಿ ಕ್ರೂರಿ ವಿಧಿ ಚೆಲ್ಲಾಟವಾಡುತ್ತಿದೆ.
ಮಗಳ ಸಾವಿನ ದುಃಖವನ್ನ ಸಹಿಸಿಕೊಳ್ಳುವ ಮೊದಲೇ ಅವರ ಕುಟುಂಬದಲ್ಲಿ ಮತ್ತೊಂದು ದುರಂತ ನಡೆದಿದೆ. ವಿಷ್ಣು ಸೋಲಂಕಿ ಅವರ ತಂದೆ ಭಾನುವಾರ ನಿಧನರಾಗಿದ್ದಾರೆ.
ಆದರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೇ ಸೋಲಂಕಿ ತಂಡದೊಂದಿಗೆ ಉಳಿದು ಮತ್ತೊಮ್ಮೆ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.
ಸೋಲಂಕಿ ತಂಡದೊಂದಿಗೆ ಬಯೋ ಬಬಲ್ನಲ್ಲಿದ್ದಾರೆ. ಸೋಲಂಕಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ವೀಡಿಯೊ ಕರೆಯಲ್ಲಿ ಮಾತ್ರ ಭಾಗವಹಿಸಿದ್ದರು.
ರಣಜಿ ಟ್ರೋಫಿ ಅಂಗವಾಗಿ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ವಿಷ್ಣು ಸೋಲಂಕಿ ಅಮೋಘ ಶತಕ ಬಾರಿಸಿದ್ದರು.
ಆದರೆ, ಕೆಲ ದಿನಗಳ ಹಿಂದೆ ವಿಷ್ಣು ಸೋಲಂಕಿ ಅವರು ಪುತ್ರಿಯನ್ನ ಕಳೆದುಕೊಂಡಿದ್ದರು. ಆ ನೋವನ್ನ ನುಂಗಿಕೊಂಡು ಕಠಿಣ ಪರಿಸ್ಥಿತಿಗಳಲ್ಲಿ ಅದ್ಭುತ ಶತಕ ಬಾರಿಸಿದ್ದರು. Vishnu-solankis-father-passes-away