karnataka : ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಚರ್ಚೆ ವಿಚಾರ , ಸ್ಪೀಕರ್ ಕಾಗೇರಿ ಪ್ರತಿಕ್ರಿಯೆ
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಚರ್ಚೆ ವಿಚಾರವಾಗಿ ವಿಧಾನಸಭಾ ಸ್ಪೀಕರ್ ಕಾಗೇರಿ ಮಾತನಾಡಿದ್ದಾರೆ.. ಎಲ್ಲರಿಗೂ ಇದರ ಅಗತ್ಯತೆ ಬಗ್ಗೆ ಮನವರಿಕೆ ಆಗಿದೆ. ಸಾರ್ವಜನಿಕವಾಗಿ ಇದು ಚರ್ಚೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಎರಡು ಸದನದಲ್ಲಿ ಎರಡು ದಿನಗಳ ಕಾಲ ಚರ್ಚೆ ನಡೆಸಲು ಸಮಾಲೋಚನೆ ಮಾಡಲಾಗಿದ್ದು ಈ ಬಗ್ಗೆ ಬಿಎಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದಿದ್ದಾರೆ…
ಇದೇ ವೇಳೆ ಹಿಜಾಬ್ ವರ್ಸಸ್ ಕೇಸರಿ ಪೈಟ್ ವಿಚಾರವಾಗಿ ಮಾತನಾಡುತ್ತಾ , ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಗಮನ ಸೆಳೆದಿದೆ. ವಿದ್ಯಾರ್ಥಿಗಳಲ್ಲಿ ಮನವಿ ಮಾಡ್ತೇನೆ. ಕೋರ್ಟ್ ಮಧ್ಯಂತರ ತೀರ್ಪು ಕೊಟ್ಟಿದೆ.. ಅದನ್ನು ನಾವು ಪಾಲಿಸೋಣ ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಆಗುತ್ತದೆ. ಆದ್ರೆ ಇದಕ್ಕೆ ಅವಕಾಶ ನೀಡದೆ, ಕೋರ್ಟ್ ತೀರ್ಪು ಅನ್ನು ಗೌರವಿಸೋಣ ಎಂದು ಹೇಳಿದ್ದಾರೆ…