ದೆಹಲಿ-ಟೋಕಿಯೋ ವಿಮಾನ ಸೇವೆಗಳನ್ನು ಪ್ರಾರಂಭಿಸಿದ ವಿಸ್ತಾರ

1 min read

ದೆಹಲಿ-ಟೋಕಿಯೋ ವಿಮಾನ ಸೇವೆಗಳನ್ನು ಪ್ರಾರಂಭಿಸಿದ ವಿಸ್ತಾರ

ನವದೆಹಲಿ:  ಕೋವಿಡ್ ಹಾವಳಿಗೆ ಬ್ರೇಕ್ ಹಾಕುವ ಸಲುವಾಗಿ ಬಹುತೇಕ ಅನೇಕ ರಾಷ್ಟ್ರಗಳು ವಿಮಾನಯಾನದ ಮೇಲೆ ನಿರ್ಬಂಧ ಹೇರಿದ್ದು, ಕ್ರಮೇಣ ಸಡಿಲಿಕೆ ಮಾಡುತ್ತಿದ್ದಾರೆ.

ಇದೀಗ ವಿಸ್ತಾರ ಏರ್ ಲೈನ್ಸ್ ದೆಹಲಿ-ಟೋಕಿಯೋ  ನಡುವಿನ ತಡೆರಹಿತ ವಿಮಾನ ಸೇವೆಯನ್ನು ಉದ್ಘಾಟಿಸಿದೆ. ಭಾರತ-ಜಪಾನ್ ನಡುವಿನ ಏರ್ ಬಬ್ಬಲ್ ಒಪ್ಪಂದದ ಅಡಿಯಲ್ಲಿ ಉದ್ಘಾಟನೆಗೊಂಡ ವಿಮಾನ ಕಾರ್ಯನಿರ್ವಹಣೆ ಮಾಡಿದೆ. ಎರಡೂ ನಗರಗಳ ನಡುವೆ ಏರ್ ಲೈನ್ ವಾರಕ್ಕೆ ಒಮ್ಮೆ ಸಂಚರಿಸಲಿದೆ.

ಹೊಸ ಮಾರ್ಗದಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಎದುರು ನೋಡುತ್ತೇವೆ ಎಂದು ವಿಸ್ತಾರಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೆಸ್ಲಿ ಥಂಗ್ ಹೇಳಿದ್ದಾರೆ. ಟಾಟಾ ಎಸ್‌ಐಎ ಏರ್ಲೈನ್ಸ್ ವಿಸ್ತಾರ ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 51:49 ಅನುಪಾತದಲ್ಲಿ ಟಾಟಾ ಸನ್ಸ್ ಹಾಗೂ ಸಿಂಗಪೂರ್ ಏರ್ಲೈನ್ಸ್ ಜಂಟಿಯಾಗಿ ನಡೆಸುತ್ತಿರುವ ಉದ್ಯಮವಾಗಿದೆ.

ಅಸಲಿ ಮತ್ತು ನಕಲಿ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚುವುದು ಹೇಗೆ ?

ಕೋವಿಡ್ ಮೂರನೇ ಅಲೆ ವಿರುದ್ಧ ಹೋರಾಡಲು ನಮ್ಮಲ್ಲಿರಬೇಕಾದ ವೈದ್ಯಕೀಯ ಉಪಕರಣಗಳು

ಮೊಬೈಲ್‌ ನಲ್ಲಿ ಮರೆತುಹೋದ ಪಾಸ್‌ವರ್ಡ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd