ಪ್ರಸಿದ್ಧ ವಿವೋ ಕಂಪನಿಯು ದೇಶದಲ್ಲಿ ತನ್ನ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದನ್ನು ಮುಂದುವರೆಸಿದೆ. ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಮೊಬೈಲ್ ಅನ್ನು ಲಾಂಚ್ ಮಾಡುತ್ತಿದೆ.
ಈಗ ಮತ್ತೊಂದು ಹೊಸ ವಿವೋ T2 ಪ್ರೊ 5G (Vivo T2 Pro 5G) ಸ್ಮಾರ್ಟ್ಫೋನ್ ಅನ್ನು ದೇಶದಲ್ಲಿ ರಿಲೀಸ್ ಮಾಡಿದೆ. ಇದು ಕೂಡ ಐಕ್ಯೂ Z7 ಪ್ರೊ ನಂತೆಯೇ ಇದೆ. T2 ಪ್ರೊನಲ್ಲಿ ಆಕರ್ಷಕವಾದ ಡಿಸ್ ಪ್ಲೇ, ಬಿಗ್ ಬ್ಯಾಟರಿ, ಬಲಿಷ್ಠ ಪ್ರೊಸೆಸರ್ ಆಯ್ಕೆ ಇದರಲ್ಲಿದೆ.
ವಿವೋ T2 ಪ್ರೊ 5G ಸ್ಮಾರ್ಟ್ಫೋನ್ ದೇಶದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 23,999 ರೂ. ಹಾಗೂ 256GB ಸ್ಟೋರೇಜ್ ಮಾದರಿ ಬೆಲೆ 24,999 ರೂ. ಆಗಿದೆ. ಸೆಪ್ಟೆಂಬರ್ 29ರಂದು ಸಂಜೆ 7ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಚಾಲನೆ ಸಿಗಲಿದೆ.