ಜಕಾರ್ತ: ಜ್ವಾಲಾಮುಖಿ ಸ್ಪೋಟಗೊಂಡ ಪರಿಣಾಮ 11 ಜನ ಪರ್ವತಾರೋಹಿಗಳು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇಂಡೋನೇಷ್ಯಾದ (Indonesia) ಮೌಂಟ್ ಮರಾಪಿಯಲ್ಲಿ (Mount Marapi)ನ ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ 14 ಜನರನ್ನು ರಕ್ಷಿಸಿದ್ದಾರೆ. 11 ಜನ ಶವವಾಗಿ ಪತ್ತೆಯಾಗಿದ್ದು, ನಾಪತ್ತೆಯಾಗದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.
ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 127 ಸಕ್ರಿಯ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ.