ಮನೆಯಿಂದಲೇ ಮತದಾರರ ಗುರುತಿನ ಚೀಟಿ (ವೊಟರ್ ಐಡಿ)ಯ ವಿಳಾಸ ನವೀಕರಣ – ಇಲ್ಲಿದೆ ಮಾಹಿತಿ
ಮಂಗಳೂರು, ಅಗಸ್ಟ್ 07: ಮತದಾರರ ಗುರುತಿನ ಚೀಟಿಯನ್ನು ಯಾವುದೇ ನಾಗರಿಕರಿಗೆ ಪ್ರಮುಖ ದಾಖಲೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಮೂಲಕ ನಾವು ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಮತದಾರರ ಗುರುತಿನ ಚೀಟಿ ಸರ್ಕಾರದ ದಾಖಲೆಯಾಗಿದ್ದು, ಇದನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮತದಾರರ ಗುರುತಿನ ಚೀಟಿ ಯಾವಾಗಲೂ ಸರಿಯಾದ ಮತ್ತು ನವೀಕರಿಸಿದ ಮಾಹಿತಿಯನ್ನು ಹೊಂದಿರಬೇಕು.
ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಹೇಗೆ ಬದಲಾಯಿಸುವುದು ಎಂಬ ಪ್ರಶ್ನೆಯನ್ನು ಸಾಮಾನ್ಯವಾಗಿ ಜನರಿಗೆ ಕಾಡುತ್ತಿರುತ್ತದೆ. ಅದಕ್ಕಾಗಿ ಸರ್ಕಾರಿ ಕಚೇರಿಗೆ ಹೋಗಬೇಕೇ ಅಥವಾ ಮನೆಯಲ್ಲಿ ಕುಳಿತು ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಮೂಡಿರುತ್ತದೆ. ಮತದಾರರ ಗುರುತಿನ ಚೀಟಿಯಲ್ಲಿ ನೀವು ವಿಳಾಸವನ್ನು ಎರಡೂ ರೀತಿಯಲ್ಲಿ ಬದಲಾಯಿಸಬಹುದು. ಇಲ್ಲಿ ಆನ್‌ಲೈನ್ ವಿಧಾನದಲ್ಲಿ ಹೇಗೆ ವಿಳಾಸವನ್ನು ಬದಲಾಯಿಸಬಹುದು ಎಂಬ ಮಾಹಿತಿ ನೀಡಿದ್ದೇವೆ.
ಇದಕ್ಕಾಗಿ, ನೀವು ಮೊದಲು ಚುನಾವಣಾ ಆಯೋಗದ ವೆಬ್‌ಸೈಟ್ https://www.nvsp.in/ ಗೆ ಭೇಟಿ ನೀಡಿ.
ವೆಬ್‌ಸೈಟ್ ನಿಮ್ಮ ಮುಂದೆ ಹಲವು ಆಯ್ಕೆಗಳನ್ನಿಡುತ್ತದೆ.
ಇಲ್ಲಿ, ‘ಟ್ರಾನ್ಸ್’ಪೊಸಿಷನ್ ವಿದ್ ಅಸೆಂಬ್ಲಿ(Transposition within Assembly)’ ಗೆ ಹೋಗಿ
‘ಫಾರ್ಮ್ 8 ಎ’ ಕ್ಲಿಕ್ ಮಾಡಿ.
ಹೊಸ ಟ್ಯಾಬ್‌ನಲ್ಲಿ ಫಾರ್ಮ್ ತೆರೆಯುತ್ತದೆ.
ಈಗ ಕೇಳಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಏಳು ವಿಳಾಸಗಳ ಪುರಾವೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ.
ಮತ್ತೊಮ್ಮೆ ಫಾರ್ಮ್ ಅನ್ನು ಸಂಪೂರ್ಣವಾಗಿ ಓದಿ
ಮಾಹಿತಿ ಸರಿಯಾಗಿದ್ದರೆ ಸಲ್ಲಿಸು ಕ್ಲಿಕ್ ಮಾಡಿ.
ಬಳಿಕ, ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡುವ ಉಲ್ಲೇಖ ಸಂಖ್ಯೆಯನ್ನು ನೀವು ಪಡೆಯುತ್ತೀರಿ.
ಇದರ ನಂತರ, ಹೊಸ ಮತದಾರರ ಗುರುತಿನ ಚೀಟಿಯನ್ನು ಕೆಲವೇ ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.