ಗಂಡೆದೆ ಗಂಗಮ್ಮಗೆ ಶಾಕ್ ಕೊಟ್ಟ ಮತದಾರರು : ಇವರು ಪಡೆದ ಮತಗಳೆಷ್ಟು ಗೊತ್ತಾ..?
ತುಮಕೂರು : ವಿಭಿನ್ನ ಕರಪತ್ರದ ಮೂಲಕ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿದ್ದ ಗಂಡೆದೆ ಗಂಗಮ್ಮಗೆ ಬಿದ್ದ ಮತಗಳೆಷ್ಟು ಗೊತ್ತಾ..? ಚಪ್ಪಲಿ ಗುರುತಿನೊಂದಿಗೆ ಗ್ರಾಮ ಪಂಚಾಯಿತಿ ಅಖಾಡಕ್ಕೆ ಇಳಿದಿದ್ದ ಗಂಗಮ್ಮಗೆ ಮತದಾರರು ಶಾಕ್ ನೀಡಿದ್ದಾರೆ. ಅವರು ಪಡೆದ ಮತಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ಹೌದು..! ತುಮಕೂರಿನ ಹೆಬ್ಬೂರು ಗ್ರಾಮ ಪಂಚಾಯಿತಿ ಕಲ್ಕೆರೆ ಕ್ಷೇತ್ರದಿಂದ ಹೆಚ್ ಗಂಗಮ್ಮ ಸ್ಪರ್ಧಿಸಿದ್ದರು. ಚಪ್ಪಲಿ ಗುರುತಿನೊಂದಿಗೆ ಕಣಕ್ಕಿಳಿದಿದ್ದ ಇವರು ವಿಭಿನ್ನ ಕರಪತ್ರ ಮತ್ತು ಪ್ರಣಾಳಿಕೆ ಹೊಂದಿಗೆ ಪ್ರಚಾರ ಮಾಡಿದ್ದರು. ಗೆದ್ದರೆ ಏನು ಮಾಡಿವೆ ಎನ್ನುವುದಕ್ಕಿಂತ ಸೋತರೆ ಏನೇನು ಮಾಡಿಸುತ್ತೇನೆ ಎಂದು ಖಡಕ್ ವಾನಿರ್ಂಗ್ ಕೂಡ ಕೊಟ್ಟಿದ್ದರು.
ಅವರು ಪ್ರಣಾಳಿಕೆಯಲ್ಲಿ ಸೋತರೂ ಕೆಲಸ ಮಾಡುವುದಾಗಿ ಹೇಳಿದ್ದು, ಸೋತರೆ 25 ಕುಟುಂಬಗಳು ಹೊಂಡಿರುವ ಅನರ್ಹ ಪಡಿತರ ಚೀಟಿಗಳ ರದ್ದು, ಸರ್ಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಮೈತ್ರಿ, ಮನಸ್ವಿನಿ, ವಿಧವಾ ವೇತನಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 40 ಕುಟುಂಬಗಳ ಹಣವನ್ನು ನಿಲ್ಲಿಸುವೆ.
ಒತ್ತುವರಿ ಆಗಿರುವ ಗ್ರಾಮ ಠಾಣಾ ಜಮೀನು ತೆರವು ಮಾಡಿಸುವುದಾಗಿ ತಿಳಿಸಿದ್ದರು. ಈ ಕರಪತ್ರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.
ಕೆಲವರು ಇವರ ಪರ ವಾದ ಮಂಡಿಸಿದ್ದರು. ಇನ್ನೂ ಕೆಲವರು ವಿರೋಧಿಸಿದ್ದರು.
ಇನ್ನು ನಿನ್ನೆ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಗಂಗಮ್ಮಗೆ ಕೇವಲ 2 ಮತಗಳು ಮಾತ್ರ ಬಿದ್ದಿವೆ. ಆ ಮೂಲಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಈಗ ಅವರು ಸೋತಿರುವ ಹಿನ್ನೆಲೆ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಕೆಲಸ ಮಾಡುತ್ತಾರಾ ಕಾದುನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









