ತಮಿಳು, ತೆಲುಗು ಸಿನಿಮಾರಂಗದ ಸ್ಟಾರ್ ನಿರ್ದೇಶಕ ಪಿ ಚಂದ್ರಶೇಖರ್ ರೆಡಿ ವಿಧಿವಶ

1 min read

ತಮಿಳು, ತೆಲುಗು ಸಿನಿಮಾರಂಗದ ಸ್ಟಾರ್ ನಿರ್ದೇಶಕ ಪಿ ಚಂದ್ರಶೇಖರ್ ರೆಡಿ ವಿಧಿವಶ

ಚೆನ್ನೈ : ತಮಿಳು, ತೆಲುಗು ಸಿನಿಮಾರಂಗದ ಸ್ಟಾರ್ ನಿರ್ದೇಶಕ ಪಿ ಚಂದ್ರಶೇಖರ್ ರೆಡಿ ಅವರು ಸೋಮವಾರ ನಿಧನರಾಗಿದ್ದಾರೆ.. ಹಿರಿಯಸ್ಟಾರ್ ನಟರಾದ NTR , ನಾಗೇಶ್ವರ್ ರಾವ್ ರಂತಹವರಿಗೆ ಸಿನಿಮಾ ನಿರ್ದೇಶಿಸಿದ್ದ  ಚಂದ್ರಶೇಖರ್ ರೆಡ್ಡಿ ಅವರ  ನಿಧನದಿಂದ ಸಿನಿಮಾರಂಗಕ್ಕೆ ಆಘಾತವಾಗಿದೆ.. ಚಂದ್ರಶೇಖರ್ ರೆಡ್ಡಿ ಅವರು ಹಲವು ದಿನಗಳಿಂದಲೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

86 ವರ್ಷ ವಯಸ್ಸಾಗಿದ್ದ ಚಂದ್ರಶೇಖರ್ ರೆಡ್ಡಿ ಚೆನ್ನೈನಲ್ಲಿ ವಾಸವಾಗಿದ್ದರು. ಅಲ್ಲಿಯೇ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 1959 ರಲ್ಲಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದ ಚಂದ್ರಶೇಖರ್ ರೆಡ್ಡಿ ಅವರು ತೆಲುಗು , ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿಗೆ , ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದ್ರು.. ಚಂದ್ರಶೇಖರ್ ನಿರ್ದೇಶನದ ಮೊದಲ ಸಿನಿಮಾ ‘ಅನುರಾಧ’. 1971 ರಲ್ಲಿ ತೆರೆಕಂಡಿತ್ತು..

ಭಲೇ ಅಲ್ಲುಡು ,  ಮಾನವಡು ದಾನವುಡು , ರಗಿಲೇ ಗುಂಡೆಲು, ವಿಚಿತ್ರ ದಾಂಪತ್ಯಂ ಹೀಗೆ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನ ಚಂದ್ರಶೇಖರ್ ರೆಡ್ಡಿ ನಿರ್ದೇಶಿಸಿದ್ದಾರೆ..  2014 ರಲ್ಲಿ ಬಂದ ಜಗನ್ನಾಯಕುಡು  ಚಂದ್ರಶೇಖರ್ ರೆಡ್ಡಿ ಅವರ ನಿರ್ದೇಶನದ ಕಡೆಯ ಸಿನಿಮಾ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd