ಜನರೇ ಎಚ್ಚರ | ಕೋವಿಡ್ ಹಾಟ್ ಸ್ಪಾಟ್ ಆಯ್ತು ಕರ್ನಾಟಕ..! covid-19
ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ರಾಜ್ಯದಲ್ಲೂ ಕೊರೊನಾ ಹೆಮ್ಮಾರಿ ಅಬ್ಬರಿಸುತ್ತಿದೆ.
ದೇಶದ ಟಾಪ್ 10 ಕೋವಿಡ್ ಹಾಟ್ ಸ್ಪಾಟ್ ರಾಜ್ಯಗಳ ಲಿಸ್ಟ್ ನಲ್ಲಿ ಕರ್ನಾಟಕವೂ ಇದೆ.
ದೇಶದ 10 ರಾಜ್ಯಗಳ 46 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10 ರಷ್ಟಿದ್ದು, 35 ಜಿಲ್ಲೆಗಳಲ್ಲಿ ಶೇ 5ರಿಂದ 10ರಷ್ಟಿದೆ.
ಈ ರಾಜ್ಯಗಳಿಗೂ ಎಚ್ಚರದಿಂದಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಸದ್ಯ ಕೇರಳದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಇದು ಕರ್ನಾಟಕದ ಗಡಿಭಾಗದಲ್ಲಿರುವ ಜನರಲ್ಲಿ ಆತಂಕ ಮನೆ ಮಾಡಿದೆ.
ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗುತ್ತಿದೆ. ಇದರಿಂದ ಕರ್ನಾಟಕದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಕೇಂದ್ರ ಕರ್ನಾಟಕ ಹೊರತು ಪಡಿಸಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಒಡಿಸ್ಸಾ, ಅಸ್ಸಾಂ, ಮೇಘಾಲಯ, ಮಿಜೋರಾಂ, ಮಣಿಪುರ ರಾಜ್ಯಗಳನ್ನು ಕೊರೊನಾ ಹಾಟ್ ಸ್ಪಾಟ್ ಲಿಸ್ಟ್ ನಲ್ಲಿ ಸೇರಿಸಿದೆ.