ಟ್ರೋಲರ್ಸ್ ವಿರುದ್ಧ ತಿರುಗಿಬಿದ್ದ ತೆಲುಗು ನಿರೂಪಕಿ ಅನಸೂಯ…
ಟಾಲಿವುಡ್ ನಿರೂಪಕಿ ಅನಸೂಯ ಮತ್ತು ಮತ್ತು ವಿಜಯ್ ದೇವರಕೊಂಡ ಫ್ಯಾನ್ಸ್ ನಡುವಿನ ಟ್ವೀಟರ್ ಜಟಾಪಟಿ ಇನ್ನೂ ಹೆಚ್ಚಾಗಿದೆ. ವಿಜಯ್ ಅಭಿನಯದ ಲೈಗರ್ ಚಿತ್ರ ಕಳಪೆ ಪ್ರದರ್ದಶನ ಕಂಡ ನಂತರ ಅನಸೂಯ ಹಾಕಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ಅನಸೂಯ ವಿರುದ್ಧ ನಟ ವಿಜಯ್ ಪ್ಯಾನ್ಸ್ ತಿರುಗಿ ಬಿದ್ದಿದ್ದರು. ಕುರಿತು ಟ್ವೀಟರ್ ನಲ್ಲಿ “ಆಂಟಿ” ಎಂದು ವಿಜಯ್ ಅಭಿಮಾನಿಗಳು ಟ್ರೆಂಡ್ ಮಾಡಿ ತರುಗೇಟು ನೀಡಿದ್ದರು.
ಅಸಲಿಗೆ ಈ ಜಟಾಪಟಿಗೆ ಕಾರಣ ಏನಪ್ಪ ಅಂದ್ರೆ ವಿಜಯ್ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಕಾರ್ಯಕ್ರಮದಲ್ಲಿ ಮಹಿಳೆಯ ವಿರುದ್ದ ಅವಮಾನಕರ ರೀತಿಯಲ್ಲಿ ಸಂಭಾಷಣೆ ಬರೆಯಲಾಗಿದೆ ಎಂದು ಅನಸೂಯ ಆಕ್ಷೇಪಿಸಿದ್ದರು. ಇದು ವಿಜಯ್ ಮತ್ತು ಅನಸೂಯ ನಡುವಿನ ಜಗಳಕ್ಕೆ ಕಾರಣವಾಗಿತ್ತು.
ಲೈಗರ್ ಸಿನಿಮಾ ಸೋತ ನಂತರ ನಿರೂಪಕಿ ಅನಸೂಯ ಮಾಡಿದ್ದ ಟ್ವೀಟ್ ವೈರಲ್ ಆದ ನಂತರ ವಿಜಯ್ ಫ್ಯಾನ್ಸ್ ಮತ್ತು ಅನಸೂಯ ನಡುವೆ ಟ್ವೀಟರ್ ನಲ್ಲಿ ವಾರ್ ನಡೆಯುತ್ತಿದೆ.
ಈ ವೇಳೆ ವಿಜಯ್ ಅಭಿಮಾನಿಯೊಬ್ಬ ನೆಟ್ಟಿಗನೊಬ್ಬ ದಿನವೊಂದಕ್ಕೆ ನಿನ್ನೆ ರೇಟ್ ಎಷ್ಟು ಎಂದು ಅಸಹ್ಯವಾಗಿ ಕಮೆಂಟ್ ಮಾಡಿದ್ದಾನೆ, ಇದಕ್ಕೆ ನಟಿ ಅನಸೂಯ ಮುಟ್ಟಿನೊಡಿಕೊಳ್ಳುವಂತಹ ರಿಪ್ಲೆ ನೀಡಿದ್ದಾರೆ.
ನಿಮ್ಮ ಸಹೋದರಿಯರಿಗೆ, ನೀವು ಮದುವೆಯಾಗಿದ್ದರೆ, ನಿಮ್ಮ ಹೆಂಡತಿ ಬಳಿ ಕೇಳಿ ಒಂದು ದಿನದಲ್ಲಿ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ರಿಪ್ಲೇ ಮಾಡಿದ್ದಾರೆ. ನಂತರ ನೆಟ್ಟಿಗ ಹೆದರಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅನಸೂಯ ಅವರ ಈ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.