ಐಸಿಯೂ ನಲ್ಲಿ ಚಿಕಿತ್ಸೆ ಪಡೆದು ಸೆಮಿ ಫೈನಲ್ ಪಂದ್ಯವನ್ನಾಡಿದ ಮಹಮ್ಮದ್ ರಿಜ್ವಾನ್

1 min read
Mohammad Rizwan pakistan t-20 wolrdcup 2021 saakshatv

ಐಸಿಯೂ ನಲ್ಲಿ ಚಿಕಿತ್ಸೆ ಪಡೆದು ಸೆಮಿ ಫೈನಲ್ ಪಂದ್ಯವನ್ನಾಡಿದ ಮಹಮ್ಮದ್ ರಿಜ್ವಾನ್

Mohammad Rizwan pakistan t-20 wolrdcup 2021 saakshatvಪಾಕಿಸ್ತಾನದ ಆರಂಭಿಕ ಮಹಮ್ಮದ್ ರಿಜ್ವಾನ್ ಅವರ ಬದ್ಧತೆ ಮತ್ತು ದೇಶಕ್ಕಾಗಿ ಆಡಲೇಬೇಕು ಅನ್ನೋ ದೇಶ ಪ್ರೇಮವನ್ನು ಮೆಚ್ಚಿಕೊಳ್ಳಲೇಬೇಕು.
ಹೌದು, ಟಿ-ಟ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ಸೋತಿರಹುದು. ಆದ್ರೆ ಪಾಕ್ ತಂಡ ಆಡಿರುವ ರೀತಿಗೆ ವಿಶ್ವ ಕ್ರಿಕೆಟ್ ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಆಟಗಾರರ ಬದ್ಧತೆ, ಶಿಸ್ತು, ಪ್ರತಿಭೆ, ಸಾಮಥ್ರ್ಯದ ಬಗ್ಗೆಯೂ ಕ್ರಿಕೆಟ್ ಪಂಡಿತರು ಶಹಬ್ಬಾಸ್ ಅನ್ನುತ್ತಿದ್ದಾರೆ.
ಈ ನಡುವೆ, ಪಾಕ್ ತಂಡದ ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಮಹಮ್ಮದ್ ರಿಜ್ವಾನ್ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಅದ್ರಲ್ಲೂ ಸೆಮಿಫೈನಲ್ ನಲ್ಲಿ ಆಕರ್ಷಕ 67 ರನ್ ಸಿಡಿಸಿದ್ದರು. ಈ ಮೊದಲು ಮಹಮ್ಮದ್ ರಿಜ್ವಾನ್ ಅವರು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಸೆಮೀಸ್ ನಲ್ಲಿ ಆಡುವುದು ಅನುಮಾನ ಅಂತ ಹೇಳಲಾಗಿತ್ತು.
ಆದ್ರೆ ಮಹಮ್ಮದ್ ರಿಜ್ವಾನ್ ಅವರು ಜ್ವರದಿಂದ ಬಳಲುತ್ತಿರಲಿಲ್ಲ. ಬದಲಾಗಿ ಮಹಮ್ಮದ್ ರಿಜ್ವಾನ್ ಹೃದಯ ಸೋಂಕಿನಿಂದ ಬಳಲುತ್ತಿದ್ದರು. ಹಾಗಾಗಿ ಎರಡು ದಿನ ಅವರು ಆಸ್ಪತ್ರೆಯಲ್ಲಿ ಐಸಿಯೂ ನಲ್ಲಿ ಚಿಕಿತ್ಸೆ ಪಡೆದಿದ್ದರು ಎಂಬ ವಿಚಾರವನ್ನು ಪಾಕ್ ಕ್ರಿಕೆಟ್ ತಂಡದ ವೈದ್ಯರು ಬಹಿರಂಗಪಡಿಸಿದ್ದಾರೆ.
Mohammad Rizwan pakistan t-20 wolrdcup 2021 saakshatvಮಹಮ್ಮದ್ ರಿಜ್ವಾನ್ ಅವರನ್ನು ನೋಡಿದಾಗ ಅವರು ತುಂಬಾ ಡಲ್ ಆಗಿದ್ದರು. ಆಗ ನಾನು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಅದಕ್ಕೆ ಅವರು ಇಲ್ಲ, ನಾನು ಆಡುತ್ತೇನೆ ಎಂದು ಹೇಳಿದ್ರು. ಖಂಡಿತವಾಗಿಯೂ ಅವರೊಬ್ಬ ತಂಡದ ಆಟಗಾರ. ಅವರ ಬದ್ಧತೆ ಮತ್ತು ಆತ್ಮವಿಶ್ವಾಸವನ್ನು ಮೆಚ್ಚುವಂತಹುದ್ದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಹೇಳಿದ್ದಾರೆ.
ನವೆಂಬರ್ 9ರಂದು ಅವರು ಎದೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ಅವರು ಐಸಿಯೂ ನಲ್ಲಿದ್ದರು. ಆದ್ರೆ ಬೇಗನೇ ಚೇತರಿಸಿಕೊಂಡ್ರು. ಅಲ್ಲದೆ ಸೆಮಿಫೈನಲ್ ಆಡಲು ಕೂಡ ಫಿಟ್ ಆಗಿದ್ದರು ಎಂದು ಪಾಕ್ ತಂಡದ ವೈದ್ಯ ನಜೀಬ್ ಸುಮ್ರೋ ಅವರು ಪಂದ್ಯದ ಬಳಿಕ ಹೇಳಿದ್ದಾರೆ.
ಇನ್ನು ಪಾಕ್ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಅವರು ಮಹಮ್ಮದ್ ರಿಜ್ವಾನ್ ಅವರನ್ನು ವಾರಿಯರ್ ಅಂತ ಬಣ್ಣಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd